ADVERTISEMENT

‘ಎನ್‌ಎಸ್‌ಎಸ್‌ನಿಂದ ಶಿಸ್ತು, ಸಂಯಮ’

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 14:29 IST
Last Updated 4 ಜನವರಿ 2019, 14:29 IST
ರಾಯಚೂರಿನ ಸಮೀಪದ ಯರಮರಸ್‌ನಲ್ಲಿ ಈಚೆಗೆ ನಡೆದ ಎನ್‌ಎಸ್‌ಎಸ್‌ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಪ್ರಾಚಾರ್ಯ ಅಲ್ಲಾಬಾಷ ಮಾತನಾಡಿದರು
ರಾಯಚೂರಿನ ಸಮೀಪದ ಯರಮರಸ್‌ನಲ್ಲಿ ಈಚೆಗೆ ನಡೆದ ಎನ್‌ಎಸ್‌ಎಸ್‌ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಪ್ರಾಚಾರ್ಯ ಅಲ್ಲಾಬಾಷ ಮಾತನಾಡಿದರು   

ರಾಯಚೂರು: ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಶಿಸ್ತು, ಸಂಯಮ ಎನ್‌ಎಸ್‌ಎಸ್‌ ಶಿಬಿರದಿಂದ ದೊರೆಯಲಿದೆ ಎಂದು ನಿವೃತ್ತ ಪ್ರಾಚಾರ್ಯ ಅಲ್ಲಾಬಾಷಾ ಹೇಳಿದರು.

ಯರಮರಸ್‌ ಆದರ್ಶ ವಿದ್ಯಾಲಯದಲ್ಲಿ ಈಚೆಗೆ ಆಯೋಜಿಸಿದ್ದ ಎನ್‌ಎಸ್‌ಎಸ್‌ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜವಾಹರನಗರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಕಾಶ ಕುಲಕರ್ಣಿ, ಮುಖ್ಯ ಶಿಕ್ಷಕ ಬಸಪ್‍ಪಗದ್ದಿ ಹಾಗೂ ಪ್ರಾಚಾರ್ಯ ಸದಾಶಿವಪ್ಪ ಮಾತನಾಡಿ, ಎನ್‌ಎಸ್‌ಎಸ್‌ ಶಿಬಿರದಿಂದ ವಿದ್ಯಾರ್ಥಿಗಳ ಜೀವನದಲ್ಲಿ ಆತ್ಮವಿಶ್ವಾಸ ಬೆಳೆಯಲಿದ್ದು, ಉತ್ತಮ ನಾಗರಿಕರಾಗಲಿದ್ದಾರೆ ಎಂದು ಹೇಳಿದರು.

ADVERTISEMENT

ಗುಲಬರ್ಗಾ ವಿಭಾಗದ ಸಹಾಯಕ ಸಂಯೋಜನಾಧಿಕಾರಿ ಎಸ್.ಶಿವರಾಜ ಮಾತನಾಡಿದರು. ಜ್ಯೋತಿ ಹಾಗೂ ಹನುಮಂತು ಪ್ರತಿಜ್ಞಾ ವಿಧಿ ಬೋಧಿಸಿದರು.

ಮುಖಂಡರಾದ ಈರಣ್ಣ ಬಾಯಿದೊಡ್ಡಿ, ಮಾರೆಪ್ಪ ಛಲವಾದಿ, ಪ್ರಾಚಾರ್ಯರಾದ ಸಿದ್ಧರಾಮಯ್ಯ, ಬೂದೆಪ್ಪ, ಚಂದ್ರಶೇಖರ ಚಿಕ್ಕಗೌಡ, ನಿರ್ಮಲಾ ಇದ್ದರು. ಶರಣಪ್ಪ ಸ್ವಾಗತಿಸಿದರು. ಶಿವಕುಮಾರ ವಂದಿಸಿದರು. ವೆಂಕಟೇಶ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.