ಕವಿತಾಳ: ಪಟ್ಟಣದ 11ನೇ ವಾರ್ಡ್‌ನ ತಾಯಮ್ಮ ದೇವಿ ದೇವಸ್ಥಾನದ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಪೂಜಾ ಕಾರ್ಯಕ್ರಮಗಳು ಜರುಗಿದವು. ಮಹಾರುದ್ರಾಭಿಷೇಕ, ಕುಂಕುಮಾರ್ಚನೆ, ಉಡಿ ತುಂಬುವ ಶಾಸ್ತ್ರ ಮತ್ತು ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ಗಂಗಾ ಸ್ಥಳದಲ್ಲಿ ಪೂಜೆ ಸಲ್ಲಿಸಿ ಡೊಳ್ಳು ಮತ್ತಿತರ ಮಂಗಳವಾದ್ಯಗಳೊಂದಿಗೆ ತನು ಬಿಂದಿಗೆಯನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಜಿತೇಂದ್ರ ತಾತನವರು ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು.
ಮುಖಂಡರಾದ ಮೌನೇಶ ಪೂಜಾರಿ ಹೀರಾ, ಶರಣಪ್ಪ ಕಡಬೂರು, ಮೌನೇಶ ಹಿರೇಕುರಬರ, ಎಚ್. ಕೆ.ಬಸವರಾಜ, ಗಂಗಪ್ಪ, ಆದಪ್ಪ ಹೀರಾ, ಆಂಜನೇಯ ಕುರಿ, ರಾಜಪ್ಪ, ಭೀಮಣ್ಣ, ಚಂದಪ್ಪ, ಹನುಮಣ್ಣ ಹುಸೇನಪುರು, ಬಸವರಾಜ, ದೇವಪ್ಪ, ಶಫಿ ಸೇರಿದಂತೆ ಮಹಿಳೆಯರು, ಮಕ್ಕಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.