ADVERTISEMENT

ದೇವದುರ್ಗ | ಶಿಕ್ಷಕ ವೃತ್ತಿ ಪವಿತ್ರವಾದದ್ದು: ಡಿವೈಎಸ್ಪಿ ಶಾಂತವೀರ

ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:50 IST
Last Updated 15 ಸೆಪ್ಟೆಂಬರ್ 2025, 5:50 IST
ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಗಡ್ಡೆಗೂಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ವತಿಯಿಂದ ಆಯೋಜಿಸಿದ್ದ ಶಿಕ್ಷಕ-ಶಿಕ್ಷಕಿಯರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ 42 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಗಡ್ಡೆಗೂಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ವತಿಯಿಂದ ಆಯೋಜಿಸಿದ್ದ ಶಿಕ್ಷಕ-ಶಿಕ್ಷಕಿಯರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ 42 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.   

ದೇವದುರ್ಗ: ನಿತ್ಯ ಮಕ್ಕಳಿಗೆ ಸಂಸ್ಕಾರ, ಜ್ಞಾನ, ಮಾನವೀಯ ಮೌಲ್ಯಗಳನ್ನು ಧಾರೆಯೆರೆಯುವ ಮಾರ್ಗದರ್ಶಕರಾಗಿ ಕೈ ಮರದಂತೆ ಕೆಲಸ ಮಾಡುವ ಕಾಯಕ ಶಿಕ್ಷಕರದ್ದಾಗಿದೆ. ಅತ್ಯಂತ ಪವಿತ್ರವಾದ ವೃತ್ತಿ ಶಿಕ್ಷಕ ವೃತ್ತಿಯಾಗಿದ್ದು’ ಎಂದು ರಾಯಚೂರು ಉಪ ವಿಭಾಗ ಡಿವೈಎಸ್ಪಿ ಶಾಂತವೀರ ಹೇಳಿದರು.

ತಾಲ್ಲೂಕಿನ ಹೂವಿನಹೆಡಗಿ ಗಡ್ಡೆಗೂಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ತಾಲ್ಲೂಕು ಘಟಕ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕನ್ನಡ ನಾಡು, ನುಡಿ, ಜಲ, ಭಾಷೆ, ಸಾಹಿತ್ಯದ ಭಾವನೆಗಳನ್ನು ಮಕ್ಕಳಲ್ಲಿ ಹೆಮ್ಮರವಾಗಿ ಬೆಳಸುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಒಳ್ಳೆಯ ವಿಚಾರವಂತಿಕೆ, ಹೃದಯವಂತಿಕೆ ಹಾಗೂ ಮಾನವೀಯ ಮೌಲ್ಯಗಳನ್ನು ಎಲ್ಲರೂ ಹೊಂದುವುದು ಅಗತ್ಯವಾಗಿ ಆಗಬೇಕಾಗಿದೆ. ಶರಣರ ವಿಚಾರಧಾರೆಗಳು ಇಡೀ ವಿಶ್ವಕ್ಕೆ ಪೂರಕವಾಗಿವೆ. ಜಾತಿ ಜಾಗದಲ್ಲಿ ನೀತಿ ಇರಬೇಕು. ನೀತಿಯ ಜಾಗದಲ್ಲಿ ಪ್ರೀತಿ ಮತ್ತು ಮೌಲ್ಯಗಳು ಹೊಂದಿರಬೇಕು’ ಎಂದರು.

ADVERTISEMENT

ಧಾರವಾಡ ನಿವೃತ್ತ ಮೇಜರ್ ಆನಂದ ಸಿಎ ಮಾತನಾಡಿ,‘ದೇಶ, ಮಹಿಳಾ ಅಭಿವೃದ್ಧಿ ಮತ್ತು ಬಡ ಕುಟುಂಬದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಪಠ್ಯಪುಸ್ತಕದ ಜತೆಗೆ ಕೌಶಲ್ಯ ಅಭಿವೃದ್ಧಿ ಮತ್ತು ಬದುಕು ರೂಪಿಸಿಕೊಳ್ಳುವ ನೈತಿಕ ಶಿಕ್ಷಣ ಪಾಠ ಮಾಡಬೇಕು ಎಂದರು.

ತಾಲ್ಲೂಕಿನ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಲ್ಲೂಕಿನ 42 ಶಿಕ್ಷಕ ಶಿಕ್ಷಕಿಯರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಾಲಹಳ್ಳಿ ಜಯಶಾಂತಲಿಗೇಶ್ವರ ಶ್ರೀ, ಗುಂಡಗುರ್ತಿ ನಿಜಗುಣಾನಂದ ಸ್ವಾಮಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.ಜೆಡಿಎಸ್ ಹಿರಿಯ ನಾಯಕ ಗೋಪಾಲಕೃಷ್ಣ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು.

ಸಹಾಯಕ ಪ್ರಾಧ್ಯಪಕ ಸುಭಾಶ್ಚಂದ್ರ ಪಾಟೀಲ, ಹುಲಿಗೇಶ ಛಲವಾದಿ ಪುಣೆ, ಸಿದ್ದಯ್ಯತಾತಾ ಗುರುವಿನ ಗಬ್ಬೂರು, ಶ್ರೀದೇವಿ ಆರ್. ನಾಯಕ, ಫಾದರ್ ಟೋಮಿ ವಿ.ಜೆ. ತಿರುಪತಿ ಸೂಗೂರು, ಪತ್ರಕರ್ತ ಸಂಘದ ಅಧ್ಯಕ್ಷ ಬಾಬುಅಲಿ ಕರಿಗುಡ್ಡ, ಚಂದ್ರಶೇಖರ ಚಿಕ್ಕಬೂದೂರು, ಜಿಲ್ಲಾಧ್ಯಕ್ಷ ಎಸ್.ಎಲ್. ಕೇಶವರಡ್ಡಿ, ತಾಲ್ಲೂಕು ಅಧ್ಯಕ್ಷ ಶಂಕರಲಿಂಗಯ್ಯ ತಾತ, ಬಲಭೀಮ ಹೂಗಾರ, ಅಯ್ಯಪ್ಪ ಕೊಂಗಂಡಿ, ಮಾರೆಪ್ಪ ಕೊತ್ತದೊಡ್ಡಿ, ಬಸವರಾಜ ಕೊಪ್ಪರು, ರವಿ ಕುಮಾರ ಗೋನಾಳ, ಸಾಬಣ್ಣ ಹೂಗಾರ, ವೆಂಕಟೇಶ ಚಿಂತಲಕುಂಟಿ, ಮಲ್ಲಯ್ಯ ಕೆ. ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.