ADVERTISEMENT

‘ಮುಖದ ಅಂದಕ್ಕೆ ದಂತಪಕ್ತಿ ಮುಖ್ಯ’

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 12:57 IST
Last Updated 16 ಜನವರಿ 2020, 12:57 IST
ರಾಯಚೂರಿನ ಎಎಂಇ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಈಚೆಗೆ ಕಾರ್ಯಾಗಾರವನ್ನು ಸಂಸ್ಥೆಯ ಅಧ್ಯಕ್ಷ ಗದಾರ್‌ ಬೆಟ್ಟಪ್ಪ ಮತ್ತು ಕಾರ್ಯದರ್ಶಿ ಎಸ್‌.ಬಿ.ಪಾಟೀಲ ಉದ್ಘಾಟಿಸಿದರು
ರಾಯಚೂರಿನ ಎಎಂಇ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಈಚೆಗೆ ಕಾರ್ಯಾಗಾರವನ್ನು ಸಂಸ್ಥೆಯ ಅಧ್ಯಕ್ಷ ಗದಾರ್‌ ಬೆಟ್ಟಪ್ಪ ಮತ್ತು ಕಾರ್ಯದರ್ಶಿ ಎಸ್‌.ಬಿ.ಪಾಟೀಲ ಉದ್ಘಾಟಿಸಿದರು   

ರಾಯಚೂರು: ಮುಖದ ಸೌಂದರ್ಯದಲ್ಲಿ ದಂತಪಕ್ತಿಗಳ ಸಾಲು ಕೂಡಾ ಒರಣವಾಗಿರಬೇಕಾಗುತ್ತದೆ ಎಂದುಆಸ್ಟ್ರೇಲಿಯಾದ ಸರಿ ಹಿಲ್ಸ್‌ ಸಿಡ್ನಿ ದಂತ ಆಸ್ಪತ್ರೆಯ ಮಕ್ಕಳ ದಂತತಜ್ಞ ಡಾ.ನಾರಾಯಣ ಗಡೇದಕರ್‌ ಹೇಳಿದರು.

ನಗರದ ಎಎಂಇ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಈಚೆಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ದಂತ‍‍‍ಪಕ್ತಿಯಲ್ಲಿನ ಏರುಪೇರುಗಳನ್ನು ದಂತಶಸ್ತ್ರಕ್ರಿಯೆ ಮೂಲಕ ಸರಿಪಡಿಸಿಕೊಳ್ಳಲು ಸಾಧ್ಯವಿದೆ. ಮೇಲಿನ ದವಡೆ ಅಥವಾ ಕೆಳಗಿನ ದವಡೆ ಎರಡನ್ನೂ ಶಸ್ತ್ರಚಿಕಿತ್ಸೆ ಮೂಲಕ ಸುಂದರಗೊಳಿಸಬಹುದಾಗಿದೆ ಎಂದರು.

ADVERTISEMENT

ಎಎಂಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗದಾರ್‌ ಬೆಟ್ಟಪ್ಪಾ, ಕಾರ್ಯದರ್ಶಿ ಎಸ್‌.ಬಿ.ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಎಎಂಇ ದಂತ ಮಹಾವಿದ್ಯಾಲಯದ ಮುಖ್ಯಸ್ಥ ಡಾ.ಬಿ.ಸಂಗಮೇಶ, ಒರಲ್‌ ಅ್ಯಂಡ್‌ ಮ್ಯಾಕ್ಸಿಲೊಫೆಸಿಯಲ್‌ ಶಸ್ತ್ರಜ್ಞ ಡಾ.ಎ.ಎಚ್‌. ಪ್ರವೀಣ,ಸಹಪ್ರಾಧ್ಯಾಪಕಡಾ.ಬಸವರಾಜ ಹಳ್ಳಿ, ಡಾ.ಎಸ್‌.ವಿ.ರಮೇಶ, ಡಾ.ನಾರಾಯಣ ದಂಡೇದಕರ್‌ ಇದ್ದರು.

ತೆಲಂಗಾಣ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಒಂಭತ್ತು ದಂತ ಮಹಾವಿದ್ಯಾಲಯಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿ 87 ಪ್ರತಿನಿಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.