ADVERTISEMENT

ಮೋದಿ ಪ್ರಧಾನಿ ಆಗಿದ್ದರಿಂದಲೇ ದೇಶ ಸುಭದ್ರ: ಪ್ರತಾಪಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 14:33 IST
Last Updated 18 ಸೆಪ್ಟೆಂಬರ್ 2024, 14:33 IST
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಮಂಗಳವಾರ ಮಸ್ಕಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಚಾಲನೆ ನೀಡಿದರು
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಮಂಗಳವಾರ ಮಸ್ಕಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಚಾಲನೆ ನೀಡಿದರು   

ಮಸ್ಕಿ: ‘ನರೇಂದ್ರ ಮೋದಿ ಅವರು ಪ್ರಧಾನಿ ಆಗಿದ್ದರಿಂದಲೇ ದೇಶ ಇವತ್ತು ಸುಭದ್ರವಾಗಿದೆ’ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.

ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಮಂಗಳವಾರ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ರೋಗಿಗಳಿಗೆ ಹಣ್ಣು, ಹಾಲು ವಿತರಣೆ ಹಾಗೂ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಳೆದ ಹತ್ತು ವರ್ಷಗಳಲ್ಲಿ ಅನೇಕ ಕೆಲಸ ಕಾರ್ಯಗಳ ಮೂಲಕ ಮೋದಿ ಇವತ್ತು ವಿಶ್ವದ ನಂ.1 ನಾಯಕರಾಗಿದ್ದಾರೆ’ ಎಂದರು. ‘ಪ್ರತಿಯೊಬ್ಬರೂ ಮೋದಿ ಅವರಂತೆ ಆಗಲು ಪ್ರಯತ್ನಿಸಬೇಕು’ ಎಂದು ಹೇಳಿದರು.

ADVERTISEMENT

ಮಂಡಲ ಅಧ್ಯಕ್ಷ ಶರಣಬಸವ ಸೊಪ್ಪಿಮಠ, ಮುಖಂಡ ಮಹಾದೇವಪ್ಪಗೌಡ ಪೊಲೀಸ್‌ಪಾಟೀಲ, ಮಲ್ಲಪ್ಪ ಅಂಕಶದೊಡ್ಡಿ, ಡಾ. ಬಿ.ಎಚ್. ದಿವಟರ್, ಶಿವಶಂಕ್ರಪ್ಪ ಹಳ್ಳಿ, ಶ್ರೀನಿವಾಸ್ ಇಲ್ಲೂರು, ಉಮಾಕಾಂತಪ್ಪ, ದೊಡ್ಡಪ್ಪ ಬುಳ್ಳಾ, ಪ್ರಸನ್ನ ಪಾಟೀಲ, ಮಲ್ಲಿಕಾರ್ಜುನ ಇತ್ಲಿ, ಪಂಚಾಕ್ಷರಯ್ಯ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಮಂಡಲ ಕಾರ್ಯದರ್ಶಿ ರಮೇಶ ಉದ್ಬಾಳ, ಬಸವರಾಜ ಗುಡಿಹಾಳ, ಜಿ.ವೆಂಕಟೇಶ ನಾಯಕ, ಮೌನೇಶ ನಾಯಕ, ಪಕ್ಷದ ಮಹಿಳಾ ಮೋರ್ಚಾದ ಅಧ್ಯಕ್ಷೆ ಚಂದ್ರಕಲಾ ದೇಶಮುಖ, ಶಾಂತಮ್ಮ ಧನಶೆಟ್ಟಿ, ಉಮಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.