ತುರ್ವಿಹಾಳ: ‘ಪಟ್ಟಣ ಸ್ವಚ್ಛವಾಗಿರಲು ಪೌರ ಕಾರ್ಮಿಕರ ಶ್ರಮ ಕಾರಣ’ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ಪಟ್ಟಣದ ಶಂಕ್ರಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಪಟ್ಟಣ ಪಂಚಾಯಿತಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದ ಸ್ವಚ್ಛತೆ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೆಕಾರ ಅವರ ಕಾರ್ಯ ಶ್ಲಾಘನೀಯ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ.ಶ್ಯಾಮೀದ್‌ಸಾಬ್ ಚೌದ್ರಿ ಮಾತನಾಡಿ,‘ಪೌರ ಕಾರ್ಮಿಕರು ಸಾರ್ವಜನಿಕರ ಆರೋಗ್ಯ ರಕ್ಷಣೆ ಮಾಡುವ ವೈದ್ಯರಿದ್ದಂತೆ. ನಿತ್ಯ ಪಟ್ಟಣದ ಸ್ವಚ್ಛತೆಗಾಗಿ ಶ್ರಮಿಸುತ್ತಿದ್ದಾರೆ. ಅವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದರು.
ಪ.ಪಂ. ಸದಸ್ಯರಾದ ಬಾಪುಗೌಡ ದೇವರಮನಿ, ಶರಣಪ್ಪ ಹೊಸಗೌಡ್ರು ಹಾಗೂ ಶಂಕ್ರಗೌಡ ದೇವರಮನಿ ಮಾತನಾಡಿದರು.
ಪ.ಪಂ.ಮುಖ್ಯಾಧಿಕಾರಿ ಸಾಬಣ್ಣ ಕಟ್ಟೆಕಾರ ಅವರು ಪೌರ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿ ಕೊಡುವಂತೆ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಪ.ಪಂ ಉಪಾಧ್ಯಕ್ಷೆ ಗಂಗಮ್ಮ ಭೋವಿ, ಆರ್.ಶಿವನಗೌಡ, ಶಿರಾಜ್ ಪಾಷಾ, ಮರಿಸ್ವಾಮಿ ಹತ್ತಿಗುಡ್ಡ, ಅಬುತೂರಾಬ್, ಶ್ಯಾಮೀದ್ ಅಲಿ, ಮಹಾಂತೇಶ ಸಜ್ಜನ, ಪ.ಪಂ.ಸದಸ್ಯರಾದ ಕರಿಯಪ್ಪ ಟೇಲರ್, ಫಕೀರಪ್ಪ ಭಂಗಿ, ಲಕ್ಷ್ಮೀ ಮಾಟೂರು, ಪದ್ಮಾವತಿ ರಡ್ಡಿ, ಲಕ್ಷ್ಮೀ ನಾಮದ, ಜಯಶ್ರೀ ಉಪ್ಪಾರ, ಬಸಮ್ಮ ಗುಂಜಳ್ಳಿಕ್ಯಾಂಪ್ ಹಾಗೂ ಪ.ಪಂ ಸಿಬ್ಬಂದಿ ಸಿದ್ದಪ್ಪ ಕಂದಗಲ್, ರಾಮಕೃಷ್ಣ ಸಿಂಧನೂರು, ರಾಜೇಶ ಕಲಮಂಗಿ, ಅಮರೇಶ ಸಿಂಧನೂರು, ಅಮರೇಶ ಕಟ್ಟಿಮನಿ, ಶ್ಯಾಮೂರ್ತಿ, ಶಂಕ್ರಪ್ಪ ಬಾಗೋಡಿ, ದೊಡ್ಡಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.