ADVERTISEMENT

ರಾಯಚೂರು: ಗೇಟ್ ಹಾರಿ ಕಳವು ಮಾಡಿದ ಮಹಿಳೆ

​ಪ್ರಜಾವಾಣಿ ವಾರ್ತೆ
Published 21 ಮೇ 2024, 15:18 IST
Last Updated 21 ಮೇ 2024, 15:18 IST

ರಾಯಚೂರು: ನಗರದ ಸ್ಟೇಶನ್ ರಸ್ತೆಯ ಉದಯನಗರದ ಮನೆಯೊಂದರಲ್ಲಿ ಮಹಿಳೆಯೊಬ್ಬಳು ಗೇಟ್ ಹಾರಿ ವಸ್ತುಗಳನ್ನು ಕಳವು ಮಾಡಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಾಣಿಜ್ಯೋದ್ಯಮಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಮಲ ಕುಮಾರ್ ಜೈನ್ ಅವರ ಹಳೇ ಮನೆಗೆ ಗೇಟ್ ಬೀಗ ಹಾಕಲಾಗಿತ್ತು. ಕೆಲಸಕ್ಕೆ ನಿಯೋಜಿಸಿದ್ದ ವ್ಯಕ್ತಿ ಬಂದಿರದ ಸಮಯ ಅರಿತು ಮಹಿಳೆ ಗೇಟ್ ಹಾರಿ ಅಲ್ಲಿದ್ದ ಡ್ರೈನೇಜ್ ಕವರ್, ಸಾಗವಾನಿ ಕಟ್ಟಿಗೆಗಳನ್ನು ಎತ್ತುಕೊಂಡು ಹೋಗಿದ್ದಾಳೆ. ಆಕೆಗೆ ಹೊರಗಡೆಯಿಂದ ಮತ್ತೊಬ್ಬ ಮಹಿಳೆ ಸಹಕಾರ ನೀಡಿದ್ದಾಳೆ. ಈ ಹಿಂದೆ ಕೂಡ ಇದೇ ರೀತಿ ಕಳವಾಗಿತ್ತು ಎಂದು ಮನೆ ಮಾಲೀಕರು ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT