ADVERTISEMENT

ಜನವರಿ 12 ರಿಂದ ಮೂರು ದಿನ ಹಾಲುಮತ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 8:30 IST
Last Updated 30 ಡಿಸೆಂಬರ್ 2025, 8:30 IST
   

ರಾಯಚೂರು: ತಿಂಥಣಿ ಬ್ರಿಜ್‌ನ ಶ್ರೀಕಾಗಿ ನೆಲೆ ಮಹಾಸಂಸ್ಥಾನ ಕನಕ ಗುರುಪೀಠ ವತಿಯಿಂದ 2025ರ ಜನವರಿ 12 ರಿಂದ 14 ವರೆಗೆ ಹಾಲುಮತ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಗುರುಪೀಠದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ ಹೇಳಿದರು.

ಮೂರು ದಿನಗಳ ವರೆಗೆ ನಡೆಯಲಿರುವ ಸಮ್ಮೇಳನದಲ್ಲಿ ವಿದ್ವಾಂಸರು, ಸಂಶೋಧಕರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಮೊದಲ ದಿನ ಹಾಲುಮತದ ಪಂಥ ಕುರಿತು ಹೈದರಬಾದ್‌ನ ವಿದ್ವಾಂಸರು ಉಪನ್ಯಾಸ ನೀಡಲಿದ್ದಾರೆ ಎಂದು ನಗರದಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಜ.13ರಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ದ್ವಾಕರನಾಥ ಹಾಗೂ 14 ರಂದು ಕನ್ನಡ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಉಪನ್ಯಾಸ ನೀಡಲಿದ್ದಾರೆ. ಸಿದ್ದ ಪರಂಪರೆ, ಬಹುಜನರ ಸಂಸ್ಕೃತಿಗಳ ಅಸ್ತಿತ್ವ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.

ಫೆ.15ರಂದು ಶಿವರಾತ್ರಿ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ, 1108 ಶಿವಲಿಂಗಗಳನ್ನು 1108 ದಂಪತಿಗಳಿಂದ ಪೂಜಿಸುವ ಕಾರ್ಯಕ್ರಮ ನಡೆಯಲಿದೆ. ಕಲಾತಂಡಗಳಿಂದ ಭಕ್ತಿ ಸಂಗೀತ, ನೃತ್ಯ, ನಾಟಕಗಳ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು

ಲಕ್ಷ್ಮಣ ಗಾಣಧಾಳ, ಮಹಾದೇವಪ್ಪ ಮಿರ್ಜಾಪುರ, ಹನುಮಂತಪ್ಪ ಜಾಲಿಬೆಂಚಿ, ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಗುಂಡಪ್ಪ ಸಾಹುಕಾರ, ನಾಗರಾಜ ಮಡ್ಡಿಪೇಟೆ, ಯಶವಂತ, ಶೇಖರ ವಾರದ, ಹನುಮಂತಪ್ಪ, ಬಸಯ್ಯ ಸಾಹುಕಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.