ADVERTISEMENT

ರಾಯಚೂರು: ಕೋವಿಡ್‌ನಿಂದ ನಾಲ್ಕು ಮಂದಿ ಸಾವು, ಮೃತರ ಸಂಖ್ಯೆ 28ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 8:11 IST
Last Updated 4 ಆಗಸ್ಟ್ 2020, 8:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಯಚೂರು: ಜಿಲ್ಲೆಯಲ್ಲಿ ಕೋವಿಡ್ ನಿಂದ ಮತ್ತೆ ನಾಲ್ಕು ಜನರು ಮೃತಪಟ್ಟಿದ್ದಾರೆ.

ಜುಲೈ 27 ರಂದು ಕೋವಿಡ್ ವಾರ್ಡ್‌ಗೆ ದಾಖಲಾಗಿದ್ದ ರಾಯಚೂರು ನಗರದ ಗಾಜಗಾರ ಪೇಟೆಯ 63 ವರ್ಷದ ಮಹಿಳೆ, ಜುಲೈ 30 ರಂದು ದಾಖಲಾಗಿದ್ದ ರಾಯಚೂರು ನಗರದ 68 ವರ್ಷದ ಮಹಿಳೆ, ಆಗಸ್ಟ್ 3 ರಂದು ದಾಖಲಾಗಿದ್ದ 54 ವರ್ಷದ ರಾಯಚೂರು ನಗರದ ವ್ಯಕ್ತಿ ಹಾಗೂ ಜುಲೈ 24 ರಂದು ದಾಖಲಾಗಿದ್ದ ರಾಯಚೂರು ತಾಲ್ಲೂಕು ತುರಕಣಡೋಣಿ ಗ್ರಾಮದ 52 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ‌.

ಇನ್ನೂ ತಜ್ಞ ವೈದ್ಯರು ವರದಿ ನೀಡುವುದು ಬಾಕಿ ಇದ್ದು, ಆನಂತರ ರಾಜ್ಯದ ಕೋವಿಡ್ ನಿರ್ವಹಣೆ ತಂಡಕ್ಕೆ ವರದಿ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್‌ನಿಂದ 28 ಜನರು ಮೃತಪಟ್ಟಿದ್ದಾರೆ‌. ‌ಈಗ ಮತ್ತೆ ನಾಲ್ಕು ಮರಣಗಳು ಸಂಭವಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.