ಕವಿತಾಳ (ರಾಯಚೂರು ಜಿಲ್ಲೆ): ಅರಣ್ಯಕೃಷಿಯಲ್ಲಿ ಖ್ಯಾತಿ ಪಡೆದ ಕವಿತಾಳದ ರೈತ ಮಹಿಳೆ ಕವಿತಾ ಮಿಶ್ರಾ ಅವರ ತೋಟದಲ್ಲಿ ಕಳ್ಳರು ಮೂರು ಶ್ರೀಗಂಧ ಮರಗಳನ್ನು ಗುರುವಾರ ರಾತ್ರಿ ಕತ್ತರಿಸಿಕೊಂಡು ಹೋಗಿದ್ದು, ಈ ಸಂಬಂಧ ಕವಿತಾಳ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಶಂಕಾಸ್ಪದವಾಗಿ ಪಟ್ಟಣದ ಹೊರಭಾಗ ಶೆಡ್ ಹಾಕಿಕೊಂಡಿದ್ದ ಹೊರರಾಜ್ಯದ ವಲಸೆ ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿಸಲಾಗಿದೆ.
ತನಿಖೆ ನಡೆಯುತ್ತಿರುವುದರಿಂದ ಮಾಹಿತಿ ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.