ADVERTISEMENT

ಮಂತ್ರಾಲಯದಲ್ಲಿ ತುಂಗಾರತಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 7:44 IST
Last Updated 7 ನವೆಂಬರ್ 2025, 7:44 IST
ಮಂತ್ರಾಲಯದ ತುಂಗಭದ್ರಾ ನದಿ ತಟದಲ್ಲಿ ಬುಧವಾರ ರಾತ್ರಿ ನಡೆದ ತುಂಗಾರತಿ ಕಣ್ತುಂಬಿಕೊಳ್ಳಲು ಸೇರಿದ್ದ ಭಕ್ತರು
ಮಂತ್ರಾಲಯದ ತುಂಗಭದ್ರಾ ನದಿ ತಟದಲ್ಲಿ ಬುಧವಾರ ರಾತ್ರಿ ನಡೆದ ತುಂಗಾರತಿ ಕಣ್ತುಂಬಿಕೊಳ್ಳಲು ಸೇರಿದ್ದ ಭಕ್ತರು    

ರಾಯಚೂರು: ಕಾರ್ತಿಕ ಶುದ್ಧ ಪೌರ್ಣಮಿಯ ಪ್ರಯುಕ್ತ ಮಂತ್ರಾಲಯದ ತುಂಗಾಭದ್ರಾ ನದಿ ದಡದಲ್ಲಿ ಬುಧವಾರ ರಾತ್ರಿ ತುಂಗಾರತಿ ವಿಜೃಂಭಣೆಯಿಂದ ನಡೆಯಿತು.

ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ತುಂಗಾರತಿ ಬೆಳಗಿದರು. ನಂತರ ಪ್ರಹಲ್ಲಾದ ರಾಜರ ಉತ್ಸವಕ್ಕೆ ಚಾಲನೆ ನೀಡಿದರು. ಇದಕ್ಕೂ ಮೊದಲು ಭಕ್ತಿ ಸಂಗೀತ ಕಾರ್ಯಕ್ರಮಗಳು ನಡೆದವು.

ತುಂಗಾರತಿ ಪೂರ್ಣಗೊಂಡ ನಂತರ ಮಠದ ಪ್ರಾಕಾರದಲ್ಲಿ ಲಕ್ಷದೀಪೋತ್ಸವ ನಡೆಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.