ತುರ್ವಿಹಾಳ: ಸಮೀಪದ ವೆಂಕಟೇಶ್ವರ ಕ್ಯಾಂಪ್‌ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ರಾಮಣ್ಣ ಎಂಬವವರನ್ನು ಶನಿವಾರ ಪೊಲೀಸರು ಬಂಧಿಸಿ 10 ಲೀಟರ್ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ನಾಗರಾಜ ಕೊಟಗಿ ತಿಳಿಸಿದ್ದಾರೆ.
ಮಟ್ಕಾ ಬುಕ್ಕಿಗಳ ಬಂಧನ: ಪಟ್ಟಣದ ಉಮೇಶ ಹಾಗೂ 7ಮೈಲ್ ಕ್ಯಾಂಪ್‌ನ ಹನುಮಂತ ಎಂಬ ಇಬ್ಬರು ಮಟ್ಕಾ ಬುಕ್ಕಿಗಳನ್ನು ಶನಿವಾರ ಬಂಧಿಸಿ ₹620 ವಶಪಡಿಸಿಕೊಂಡು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.