ADVERTISEMENT

ಮದ್ಯ ನಿಷೇಧಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 13:37 IST
Last Updated 31 ಜನವರಿ 2019, 13:37 IST
ರಾಯಚೂರಿನಲ್ಲಿ ಈಚೆಗೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಡಳಿತ ಅಧಿಕಾರಿಗೆ ಮನಿ ಸಲ್ಲಿಸಿದರು
ರಾಯಚೂರಿನಲ್ಲಿ ಈಚೆಗೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಡಳಿತ ಅಧಿಕಾರಿಗೆ ಮನಿ ಸಲ್ಲಿಸಿದರು   

ರಾಯಚೂರು: ಮದ್ಯ ನಿಷೇಧಕ್ಕಾಗಿ ಒತ್ತಾಯಿಸಿ ಹಮ್ಮಿಕೊಂಡ ಪಾದಯಾತ್ರೆಯಲ್ಲಿ ಮೃತಪಟ್ಟಿರುವ ರೇಣುಕಮ್ಮ ಸಾವಿನಿಂದಾದರೂ ಎಚ್ಚೆತ್ತುಕೊಂಡು ಮದ್ಯ ನಿಷೇಧ ಮಾಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಈಚೆಗೆ ಮನವಿ ಸಲ್ಲಿಸಿದರು.

ಚಿತ್ರದುರ್ಗದಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಟಿದ್ದ ರೇಣಕುಮ್ಮ ಮೃತಪಟ್ಟ ನಂತರವೂ ಯಾವುದೇ ಸಚಿವರು ಸ್ಥಳಭೇಟಿ ನೀಡಿಲ್ಲ. ಮಹಿಳೆಯರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಕಡಿತದಿಂದ ಆರ್ಥಿಕ ನಷ್ಟ, ಅನಾರೋಗ್ಯ ಸೇರಿದಂತೆ ಸಮಾಜದ ಸ್ವಾಸ್ಥ್ಯ ಹಾಳಾಗಿರುವುದು ಸರ್ಕಾರದ ಅಂಕಿ ಅಂಶಗಳಿಂದ ತಿಳಿದುಬರಲಿದೆ ಎಂದು ದೂರಿದರು.

ಮೃತಳ ಕುಟುಂಬಕ್ಕೆ ಪರಿಹಾರ ನೀಡಬೇಕು. ಜೊತೆಗೆ ಮದ್ಯ ನಿಷೇಧ ಮಾಡಬೇಕು. ಲಕ್ಷಾಂತರ ಕುಟುಂಬಗಳಲ್ಲಿ ನೆಮ್ಮದಿಯ ವಾತಾವರಣ ಮೂಡಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಜನಾರ್ದನ ಹಳ್ಳಿಬೆಂಚಿ, ತಾಯಪ್ಪ, ಕೆ.ಪಿ.ಅನಿಲಕುಮಾರ, ವೆಂಕಟೇಶ ಭಂಡಾರಿ, ವೀರಮ್ಮ, ಶೋಭಾ, ಅಮರಮ್ಮ, ವೀರಶೇ, ರಾಮಣ್ಣ, ಪ್ರಭಾವತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.