ADVERTISEMENT

ರಾಯಚೂರು: ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 8:18 IST
Last Updated 25 ಆಗಸ್ಟ್ 2025, 8:18 IST
ರಾಯಚೂರಿನ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್‌ ನಂ.34ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಹಾಗೂ ನಗರ ಶಾಸಕ ಡಾ. ಶಿವರಾಜ ಪಾಟೀಲ ಜಂಟಿಯಾಗಿ ಚಾಲನೆ ನೀಡಿದರು. ತಮ್ಮಪ್ಪ ನಾಯಕ, ಬಸವರಾಜ ದರೂರು, ಅಬ್ದುಲ್‌ ಕರೀಂ ಉಪಸ್ಥಿತರಿದ್ದರು

ರಾಯಚೂರು: ನಗರದ ವಾರ್ಡ್ ನಂ‌.34ರ ಬಂದೇನವಾಜ್ ಕಾಲೊನಿ, ದೇವರಾಜ ಅರಸು ಕಾಲೊನಿ,‌ ಹಾದಿ ಕಾಲೊನಿ ಹಾಗೂ ಶಾಂತಿ ಕಾಲೊನಿಯ ವಿವಿಧ ಬಡಾವಣೆಗಳಲ್ಲಿ ₹3 ಕೋಟಿ ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.

ವಿಧಾನ‌ ಪರಿಷತ್ ಸದಸ್ಯ ಎ.ವಸಂತಕುಮಾರ ಹಾಗೂ ನಗರ ಶಾಸಕ ಡಾ.ಶಿವರಾಜ ಪಾಟೀಲ ಅಭಿವೃದ್ಧಿ ಕಾಮಗಾರಿಗಳಿಗೆ ಜಂಟಿಯಾಗಿ ಚಾಲನೆ ನೀಡಿದರು.

ಸ್ಥಳಿಯ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ನಿವಾರಿಸಬೇಕು. ಒಳಚರಂಡಿ ನಿರ್ಮಾಣ ಮಾಡಬೇಕು. ಸ್ಥಳೀಯವಾಗಿ ಮತಗಟ್ಟೆ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಕೆಪಿಸಿಸಿ ವಕ್ತಾರ ರಝಾಕ್ ಉಸ್ತಾದ್, ನಗರಸಭೆ ಸದಸ್ಯರಾದ ತಮ್ಮಪ್ಪ ನಾಯಕ, ಬಸವರಾಜ ದರೂರು, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ ಕರೀಂ, ಮೊಹಮ್ಮದ್ ಉಸ್ಮಾನ್, ಮುರಳಿ ಯಾದವ, ಶ್ರಿನಿವಾಸ ಶಿಂದೆ ಹಾಗೂ ಆಂಜನೇಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.