ADVERTISEMENT

ರಾಯಚೂರು: ಬಹುತೇಕ ತರಕಾರಿ ಬೆಲೆ ಸ್ಥಿರ

ಚಂದ್ರಕಾಂತ ಮಸಾನಿ
Published 22 ಜುಲೈ 2025, 4:21 IST
Last Updated 22 ಜುಲೈ 2025, 4:21 IST
<div class="paragraphs"><p>ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಿರುವ ವ್ಯಾಪಾರಿ  </p></div>

ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಿರುವ ವ್ಯಾಪಾರಿ

   

ಚಿತ್ರ: ಶ್ರೀನಿವಾಸ ಇನಾಂದಾರ್

ರಾಯಚೂರು: ಮಾರುಕಟ್ಟೆಯಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಬಹುತೇಕ ತರಕಾರಿ ಬೆಲೆ ಸ್ಥಿರವಾಗಿದೆ. ಗ್ರಾಹಕರ ಅಚ್ಚುಮೆಚ್ಚಿನ ತರಕಾರಿ ಬೆಲೆ ಮಾತ್ರ ಇಳಿದಿಲ್ಲ.

ADVERTISEMENT

ಅಡಿಗೆಗೆ ನಿತ್ಯ ಅಗತ್ಯವಿರುವ ಮೆಣಸಿನಕಾಯಿ, ಗೋಬಿ ಮಂಚೂರಿಗೆ ಹೆಚ್ಚು ಬಳಸುತ್ತಿರುವ ಎಲೆಕೋಸು ಹಾಗೂ ಹಿರೇಕಾಯಿ ಪ್ರತಿ ಕೆ.ಜಿಗೆ ₹ 60ಗೆ ಮಾರಾಟವಾಗುತ್ತಿದೆ. ಗ್ರಾಹಕರು ಪ್ರರ್ಯಾಯ ಇಲ್ಲದೇ ಅನಿವಾರ್ಯವಾಗಿ ಕೊಂಡು ಕೊಳ್ಳಬೇಕಾಗಿದೆ.

ಹೂಕೋಸು, ಬೆಂಡೆಕಾಯಿ, ಡೊಣಮೆಣಸಿನಕಾಯಿ, ತುಪ್ಪದ ಹಿರೇಕಾಯಿ, ಚವಳೆಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ‌ ₹ 1 ಸಾವಿರ ಹೆಚ್ಚಾಗಿದೆ. ಸೌತೆಕಾಯಿ ಮಾತ್ರ ಕ್ವಿಂಟಲ್‌ಗೆ ₹ 500 ಹೆಚ್ಚಳವಾಗಿದೆ. ಗಜ್ಜರಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹1 ಸಾವಿರ ಕಡಿಮೆಯಾಗಿದೆ.

ಈರುಳ್ಳಿ, ಬೆಳ್ಳುಳ್ಳಿ, ‌ಆಲೂಗಡ್ಡೆ, ಮೆಣಸಿನಕಾಯಿ, ಎಲೆಕೋಸು, ತೊಂಡೆಕಾಯಿ, ಬೀಟ್‌ರೂಟ್‌, ಬೀನ್ಸ್, ಟೊಮೆಟೊ, ಬದನೆಕಾಯಿ, ಹಿರೇಕಾಯಿ ಬೆಲೆ ಸ್ಥಿರವಾಗಿದೆ.

ನಗರದ ತರಕಾರಿ ಸಗಟು ಮಾರುಕಟ್ಟೆಗೆ ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ, ಮೆಂತೆ ಸೊಪ್ಪು, ರಾಯಚೂರು ಗಡಿ ಗ್ರಾಮಗಳಿಂದ ಹಿರೇಕಾಯಿ, ಟೊಮೆಟೊ, ಚವಳೆಕಾಯಿ, ಸೋರೆಕಾಯಿ, ಸೌತೆಕಾಯಿ, ಎಲೆಕೋಸು, ಹೂಕೋಸು ಬಂದಿದೆ.

‘ರಾಯಚೂರು ತಾಲ್ಲೂಕಿನ ಗ್ರಾಮಗಳಿಂದ ಕಡಿಮೆ ಪ್ರಮಾಣದಲ್ಲಿ ತರಕಾರಿ ಮಾರುಕಟ್ಟೆಗೆ ಬಂದಿದೆ. ಹೊರ ಜಿಲ್ಲೆಗಳಿಂದ ಬಂದಿರುವ ತರಕಾರಿಗೆ ಸ್ಪಲ್ಪ ಮಟ್ಟಿಗೆ ಬೆಲೆ ಜಾಸ್ತಿ ಇದೆ’ ಎಂದು ತರಕಾರಿ ವ್ಯಾಪಾರಿ ಮಹ್ಮದ್ ಖಾಜಾ ಹುಸೇನಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.