ADVERTISEMENT

ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 4:24 IST
Last Updated 19 ಏಪ್ರಿಲ್ 2021, 4:24 IST
ಮಾನ್ವಿಯಲ್ಲಿ ವಿಜಯನಗರ ಸಾಮಾಜ್ಯ ಸಂಸ್ಥಾಪನಾ ದಿನ ಆಚರಿಸಲಾಯಿತು
ಮಾನ್ವಿಯಲ್ಲಿ ವಿಜಯನಗರ ಸಾಮಾಜ್ಯ ಸಂಸ್ಥಾಪನಾ ದಿನ ಆಚರಿಸಲಾಯಿತು   

ಮಾನ್ವಿ: ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ವತಿಯಿಂದ ಶುಕ್ರವಾರ ಪಟ್ಟಣದ ಮಹರ್ಷಿ ವಾಲ್ಮೀಕಿ ವೃತ್ತದ ಬಳಿ ವಿಜಯನಗರ ಸಾಮ್ರಾಜ್ಯದ 686ನೇ ಸಂಸ್ಥಾಪನಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸವ ನಾಯಕ ಜಾನೇಕಲ್ ಮಾತನಾಡಿ, ‘ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಮೂಲಪುರುಷರಾದ ಹಕ್ಕ ಬುಕ್ಕರ ಕೊಡುಗೆ ಸ್ಮರಣೀಯ. ಹಕ್ಕಬುಕ್ಕರು, ಗಂಡುಗಲಿ ಕುಮಾರರಾಮರಂತಹ ಮಹನೀಯರ ಬಗ್ಗೆ ಎಲ್ಲರೂ ತಿಳಿದುಕೊಳ್ಳುವುದು ಅಗತ್ಯ’ ಎಂದರು. ‌

ಕಾರ್ಯಕ್ರಮದ ಅಂಗವಾಗಿ ಗಣ್ಯರು ಹಕ್ಕ ಬುಕ್ಕರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು

ADVERTISEMENT

ಪುರಸಭೆಯ ಮಾಜಿ ಸದಸ್ಯ ರಾಜಾ ಶಾಮಸುಂದರ್ ನಾಯಕ, ಅಯ್ಯಪ್ಪ ನಾಯಕ ಮ್ಯಾಕಲ್, ಬುಡ್ಡಪ್ಪ ನಾಯಕ ಮಲ್ಲಿನಮಡುಗು, ಹನುಮೇಶ ನಾಯಕ ಜೀನೂರು, ಅಂಬಣ್ಣ ನಾಯಕ, ಶಿಕ್ಷಕ ಶಾಂತಯ್ಯಸ್ವಾಮಿ, ಶಿಕ್ಷಕ ಗೋಪಾಲ ನಾಯಕ ಜೂಕೂರು, ಹನುಮೇಶ ನಾಯಕ ನೀರಮಾನ್ವಿ, ಜೆಸ್ಕಾಂ ಅಧಿಕಾರಿ ಗುರುರಾಜ ದೊರೆ, ಡಾ.ಅಂಬಿಕಾ ನಾಯಕ, ಮಹಾದೇವ ನಾಯಕ ದದ್ದಲ, ಯಲ್ಲಪ್ಪ ಮಾನ್ವಿ, ಚಂದ್ರು ಚಿಮ್ಲಾಪುರು, ವೆಂಕಟೇಶ, ಅಮರೇಶ ನಲಗಂದಿನ್ನಿ, ಬೆಟ್ಟಪ್ಪ ಜೀನೂರು ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.