ADVERTISEMENT

ವಿನೋದ ಮಿಶ್ರಾರ 27ನೇ ಸ್ಮರಣೆ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 6:28 IST
Last Updated 20 ಡಿಸೆಂಬರ್ 2025, 6:28 IST
ರಾಯಚೂರು ತಾಲ್ಲೂಕಿನ ಸಿಪಿಐಎಂಎಲ್ ಲಿಬರೇಶನ್ ಪಕ್ಷದಿಂದ ವಿನೋದ ಮಿಶ್ರಾರ 27ನೇ ಸ್ಮರಣೆ ದಿನ ಆಚರಿಸಲಾಯಿತು
ರಾಯಚೂರು ತಾಲ್ಲೂಕಿನ ಸಿಪಿಐಎಂಎಲ್ ಲಿಬರೇಶನ್ ಪಕ್ಷದಿಂದ ವಿನೋದ ಮಿಶ್ರಾರ 27ನೇ ಸ್ಮರಣೆ ದಿನ ಆಚರಿಸಲಾಯಿತು   

ರಾಯಚೂರು: ಸಿಪಿಐಎಂಎಲ್ ಲಿಬರೇಶನ್ ಪಕ್ಷದಿಂದ ಯರಗೇರಾದಲ್ಲಿ ವಿನೋದ ಮಿಶ್ರಾ ಅವರ 27ನೇ ಸ್ಮರಣೆ ಕಾರ್ಯಕ್ರಮ ನಡೆಯಿತು.

ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ಮುಖಂಡ ಅಜಿಜ್ ಜಾಗೀದಾರ್ ಮಾತನಾಡಿ 'ಸಿಪಿಐ(ಎಂ ಎಲ್) ಲಿಬರೇಶನ್ ಪಕ್ಷವು ಒಂದು ದೊಡ್ಡ, ಪ್ರಬಲ, ಚಲನಶೀಲ ಕಮ್ಯುನಿಸ್ಟ್ ಪಕ್ಷವಾಗಿ ಬೆಳೆಯಬೇಕೆಂದು ಅಪೇಕ್ಷಿಸಿದ್ದ ಹಿರಿಯ ನಾಯಕ ವಿನೋದ ಮಿಶ್ರಾ ಅವರು ದೇಶದಲ್ಲಿ ನೈಜ ಪ್ರಜಾಪ್ರಭುತ್ವ ವನ್ನು ಸ್ಥಾಪಿಸಲು ಪ್ರಯತ್ನಿಸಿದ್ದರು’ ಎಂದರು.

‘ಅನೇಕ ಅಡೆತಡೆ ಗಳ ನಡುವೆಯೂ ಸ್ವಾತಂತ್ರ್ಯವನ್ನು ರಕ್ಷಿಸುವಂತಹ ದಿಟ್ಟ, ಬಲಾಡ್ಯ, ಪ್ರಬುದ್ಧ ಪಕ್ಷವಾಗಿ ರೂಪುಗೊಳ್ಳಬೇಕೆಂದು ಆಶಿಸಿದ್ದರು. ಪಕ್ಷವು ಪ್ರಜೆಗಳ ಧ್ವನಿಗೆ ಧ್ವನಿಯಾಗಿ, ಸಂಸದೀಯ ವಲಯದಲ್ಲೂ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಜನತೆಯ ಧ್ವನಿಯನ್ನು ಗಟ್ಟಿಗೊಳಿಸುವ

ADVERTISEMENT

ನಿಟ್ಟಿನಲ್ಲಿ ತಮ್ಮ ಜೀವಿತಾವಧಿಯವರೆಗೂ ಅವಿರತವಾಗಿ ಕೆಲಸ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.

‘ಮುಂದೆ ಎದುರಾಗುವ ಮಹತ್ವದ ಜನ ಚಳವಳಿ ದಿನಗಳಿಗೆ ನಾವು ನಮ್ಮೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಸಿದ್ಧರಾಗಬೇಕು. ಹೊಸ ವರ್ಷದಲ್ಲಿ ನಮ್ಮ ಚಳವಳಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಪಕ್ಷವನ್ನು ವಿಸ್ತರಿಸಿ, ಸಂಪೂರ್ಣ ಸಂಘಟನೆಯನ್ನು ಚೈತನ್ಯಗೊಳಿಸೋಣ‘ ಎಂದರು.

ಗ್ರಾಮ ಘಟಕದ ಅಧ್ಯಕ್ಷ ಹನೀಸ್ ಅಬಕಾರಿ, ಮುಖಂಡರಾದ ಜಗದೀಶ್, ಜಿಲಾನಿ ಪಾಷಾ, ಆಂಜನೇಯ, ದುಳ್ಳಯ್ಯ ನಾಯಕ್, ಅಬ್ರಾರ್ ಅಹಮದ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.