ADVERTISEMENT

ಲಿಂಗಸುಗೂರು: ನಿರ್ವಹಣೆ ನಿರ್ಲಕ್ಷ್ಯ, ಜಮೀನಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 3:59 IST
Last Updated 31 ಜುಲೈ 2021, 3:59 IST
ಲಿಂಗಸುಗೂರು ತಾಲ್ಲೂಕು ಐದನಾಳ ಗ್ರಾಮದ ಬಳಿ ಶುಕ್ರವಾರ ರಾಂಪೂರ ಏತ ನೀರಾವರಿ ಯೋಜನೆ ವಿತರಣಾ ಕಾಲುವೆಯ ನೀರು ಗ್ರಾಮದ ರಸ್ತೆಯಲ್ಲಿ ಹರಿಯುತ್ತಿರುವುದು
ಲಿಂಗಸುಗೂರು ತಾಲ್ಲೂಕು ಐದನಾಳ ಗ್ರಾಮದ ಬಳಿ ಶುಕ್ರವಾರ ರಾಂಪೂರ ಏತ ನೀರಾವರಿ ಯೋಜನೆ ವಿತರಣಾ ಕಾಲುವೆಯ ನೀರು ಗ್ರಾಮದ ರಸ್ತೆಯಲ್ಲಿ ಹರಿಯುತ್ತಿರುವುದು   

ಲಿಂಗಸುಗೂರು: ನವಲಿ ರಾಂಪುರ ಜಡಿಶಂಕರಲಿಂಗ ಏತ ನೀರಾವರಿ ಯೋಜನೆ ಪೂರ್ವ ಶಾಖಾ ಕಾಲುವೆ 2ನೇ ವಿತರಣಾ ನಾಲೆ ಮೇಲುಸ್ತುವಾರಿ ಮತ್ತು ನಿರ್ವಹಣೆ ನಿರ್ಲಕ್ಷ್ಯದಿಂದ ಜಮೀನುಗಳಿಗೆ ನೀರು ನುಗ್ಗಿ ವ್ಯರ್ಥವಾಗಿ ಹರಿಯುತ್ತಿದೆ.

ಐದನಾಳ ಗ್ರಾಮದ ಮೇಲ್ಭಾಗದಲ್ಲಿ ವಿತರಣಾ ನಾಲೆಯ ಅವೈಜ್ಞಾನಿಕ ಕಾಲುವೆ ನಿರ್ಮಾಣ ಹಾಗೂ ಮುಳ್ಳು ಕಂಟಿ ಬೆಳೆದು ಓವರ್‌ ಫ್ಲೋ ಆಗಿ ಜಮೀನಿಗೆ ನೀರು ನುಗ್ಗಿ, ಗ್ರಾಮದ ರಸ್ತೆಯಲ್ಲಿಯೂ ಹರಿಯುತ್ತಿದ್ದೆ.

ಹೊಲ ಮನೆಗೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದೆ. ಕೃಷಿ ಚಟುವಟಿಕೆಗೆ ಹೋಗಲು ಸಾಧ್ಯವಾ ಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಅವೈಜ್ಞಾನಿಕ ನಾಲೆ ನಿರ್ಮಾಣ ಮತ್ತು ನಿರ್ವಹಣೆ ಸಮಸ್ಯೆಯಿಂದ ಪ್ರತಿ ವರ್ಷ ನಾಲೆಗೆ ನೀರು ಹರಿಯದೆ ಜಮೀನು ರಸ್ತೆಗೆ ವ್ಯರ್ಥ ನೀರು ಪೋಲಾಗುತ್ತಿದೆ. ಅಧಿಕಾರಿಗಳ ಗಮನಕ್ಕೆ ತಂದಿದ್ದರು ಸ್ಪಂದಿಸುತ್ತಿಲ್ಲ. ಕೂಡಲೆ ಅಧಿಕಾರಿಗಳು ಇದನ್ನು ಸರಿಪಡಿಸಲು ಮುಂದಾಗಬೇಕು’ ಎಂದು ರೈತ ರುದ್ರಯ್ಯಸ್ವಾಮಿ ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.