ADVERTISEMENT

ಕವಿತಾಳ: ನೀರು ಪೂರೈಕೆ ಸ್ಥಗಿತ ಸಾರ್ವಜನಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 4:25 IST
Last Updated 22 ಜುಲೈ 2025, 4:25 IST
ಕವಿತಾಳ ಸಮೀಪದ ಹುಸೇನಪುರ ಗ್ರಾಮದಲ್ಲಿ ಖಾಸಗಿ ಕೊಳವೆಬಾವಿ ನೀರು ಹಿಡಿಯಲು ಮಹಿಳೆಯರು ಪರದಾಡುತ್ತಿರುವುದು.
ಕವಿತಾಳ ಸಮೀಪದ ಹುಸೇನಪುರ ಗ್ರಾಮದಲ್ಲಿ ಖಾಸಗಿ ಕೊಳವೆಬಾವಿ ನೀರು ಹಿಡಿಯಲು ಮಹಿಳೆಯರು ಪರದಾಡುತ್ತಿರುವುದು.   

ಕವಿತಾಳ: ಸಮೀಪದ ಹುಸೇನಪುರ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ನೀರು ಪೂರೈಕೆ ಸ್ಥಗಿತವಾಗಿದ್ದು, ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಗ್ರಾಮಕ್ಕೆ ನೀರು ಪೂರೈಸುವ ಕೊಳವೆಬಾವಿ ಮೋಟರ್‌ ಕೆಟ್ಟಿದ್ದು, ಜನ-ಜಾನುವಾರುಗಳಿಗ ಕುಡಿಯಲು ಮತ್ತು ಬಳಕೆ ನೀರಿಗೆ ಸಮಸ್ಯೆ ಉಂಟಾಗಿದೆ.

ಜಮೀನುಗಳಿಗೆ ಕೆಲಸಕ್ಕೆ ಹೋಗುವುದು ಬಿಟ್ಟು ನೀರಿಗಾಗಿ ಅಲೆಯುವಂತಾಗಿದೆ. ಗ್ರಾಮದಲ್ಲಿನ ಶುದ್ದೀಕರಣ ಘಟಕವೂ ಹಾಳಗಿದೆ ಹೀಗಾಗಿ ಕುಡಿಯಲು ಮತ್ತು ಬಳಕೆ ನೀರಿಗೆ ಸಮಸ್ಯೆ ಎದುರಾಗಿದೆ. ಮನೆ ನಿರ್ಮಾಣ ಹಿನ್ನೆಲೆಯಲ್ಲಿ ರೈತರೊಬ್ಬರು ಹೊಲದಲ್ಲಿನ ಕೊಳವೆಬಾವಿಯ ಸಂಪರ್ಕ ಪಡೆದಿದ್ದಾರೆ. ಸದ್ಯ ಅವರ ಕೊಳವೆ ಬಾವಿಯಿಂದ ನೀರು ತರುತ್ತಿದ್ದೇವೆ’ ಎಂದು ಮಹಿಳೆಯರು ದೂರಿದರು.

ADVERTISEMENT
ಕವಿತಾಳ ಸಮೀಪದ ಹುಸೇನಪುರ ಗ್ರಾಮದಲ್ಲಿ ಖಾಸಗಿ ಕೊಳವೆಬಾವಿ ನೀರು ಹಿಡಿಯಲು ಮಹಿಳೆಯರು ಪರದಾಡುತ್ತಿರುವುದು.
ಕೊಳವೆಬಾವಿ ಮೋಟರ್‌ ಕೆಟ್ಟಿರುವ ಕುರಿತು ಮಾಹಿತಿ ಇದೆ. ಶೀಘ್ರದಲ್ಲಿಯೇ ದುರಸ್ತಿ ಕೈಗೊಂಡು ನೀರು ಪೂರೈಕೆ ಮಾಡಲಾಗುವುದು
ಪ್ರಸಾದ ಹಿರೇಹಣಿಗಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.