ADVERTISEMENT

ರಾಯಚೂರು | ಜೆಸಿಬಿಯಿಂದ ಮಣ್ಣು ಸುರಿದ ಚಾಲಕ: ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2024, 14:07 IST
Last Updated 15 ಆಗಸ್ಟ್ 2024, 14:07 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ರಾಯಚೂರು: ನಗರದ ಜನತಾ ಕಾಲೊನಿಯ ಬಡಾವಣೆಯಲ್ಲಿ ಗುರುವಾರ ಮುಂಜಾನೆ ಬಯಲು ಶೌಚಕ್ಕೆ ಹೋಗಿದ್ದ ಮಹಿಳೆಯ ಮೇಲೆ ಜೆಸಿಬಿ ಯಂತ್ರದಿಂದ ಸುರಿದ ಮಣ್ಣುಬಿದ್ದು ಆಕೆ ಮೃತಪಟ್ಟಿದ್ದಾರೆ.

ADVERTISEMENT

ಮೃತ ಮಹಿಳೆಯನ್ನು ತಾಯಮ್ಮ (32) ಎಂದು ಗುರುತಿಸಲಾಗಿದೆ. ಜೆಸಿಬಿ ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ನಗರದ ಆಶಾಪುರ ರಸ್ತೆಯ ಜನತಾ ಕಾಲೊನಿಯ ಬಡಾವಣೆಯಲ್ಲಿ ಖಾಲಿ ನಿವೇಶನದಲ್ಲಿ ಜಾಲಿ ಗಿಡಗಳು ಬೆಳೆದಿದ್ದರಿಂದ ಮನೆಯ ಮಾಲೀಕರ ಸೂಚನೆ ಮೇರೆಗೆ ಬೆಳಗಿನ ಜಾವ ಜೆಸಿಬಿ ಚಾಲಕ ಗಿಡಗಂಟಿಗಳನ್ನು ಸ್ಚಚ್ಛಗೊಳಿಸಿ ಮಣ್ಣು ಸುರಿಯತ್ತಿದ್ದಾಗ ಬಹಿರ್ದೆಸೆ ಮಾಡುತ್ತಿದ್ದ ಮಹಿಳೆಯ ಮೇಲೆ ಮಣ್ಣು ಬಿದ್ದಿದೆ. ಪಶ್ಚಿಮ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.