
ಹಟ್ಟಿ ಚಿನ್ನದ ಗಣಿ: ‘ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದೆ ಇರುವುದರಿಂದ ಅತ್ಯಾಚಾರ, ಕೊಲೆ ದೌರ್ಜನ್ಯಗಳು ಜರುಗುತ್ತಿವೆ. ಹಟ್ಟಿ ಪಟ್ಟಣದ ನಿವಾಸಿ ಜ್ಯೋತಿ ಕೊಲೆಯೇ ಇದಕ್ಕೆ ಸಾಕ್ಷಿ’ ಎಂದು ರಾಜ್ಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ವಿದ್ಯಾ ಪಟೇಲ್ ಹೇಳಿದರು.
ಹಟ್ಟಿ ಪಟ್ಟಣದ ಕ್ಯಾಂಪ್ ಬಸ್ ನಿಲ್ದಾಣದಲ್ಲಿ ರಾಜ್ಯ ಮಹಿಳಾ ಒಕ್ಕೂಟ ಹಾಗೂ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಮಹಿಳೆಯರು ಮೇಲಿನ ಕೊಲೆ, ಅತ್ಯಚಾರ, ಖಂಡಿಸಿ ಹಮ್ಮಿಕೊಂಡಿದ್ದ ಧರಣಿಯಲ್ಲಿ ಅವರು ಮಾತನಾಡಿದರು.
‘ಹಟ್ಟಿ ಪಟ್ಟಣದಲ್ಲಿ ಮಹಿಳೆಯರ ಮೇಲೆ ಕೊಲೆ, ಸುಲಿಗೆ, ಅತ್ಯಚಾರ ನಡೆಯುತ್ತಿದ್ದು ಸುವ್ಯವಸ್ಧೆ ಕಾಪಾಡಬೇಕಾದ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಕರ್ತವ್ಯ ನಿರ್ವಸುತ್ತಿದ್ದಾರೆ. ಇದನ್ನು ಖಂಡಿಸುತ್ತೇವೆ. ಜ್ಯೋತಿ ಎನ್ನುವ ಯುವತಿ ಕೊಲೆಯಾಗಿ ಕೆಲವು ದಿನಗಳು ಕಳೆದರೂ ಆರೋಪಿಗಳನ್ನು ಬಂದಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಜ್ಯೋತಿ ಅವರ ಕುಟುಂಬಕ್ಕೆ ನ್ಯಾಯ ಸಿಗುವರೆಗೂ ಹೋರಾಟ ಮಾಡುತ್ತೇವೆ, ಇದು ಆರಂಭ’ ಎಂದರು.
ಮೋಕ್ಷಮ್ಮ ಮಾತನಾಡಿ, ‘ತಪ್ಪಿತಸ್ಧರಿಗೆ ಶಿಕ್ಷೆ ಆಗದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟಗಳು ನಡೆಯಲಿವೆ’ ಎಂದು ಎಚ್ಚರಿಕೆ ನೀಡಿದರು.
ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ರಾಜ್ಯ ಕಾರ್ಯದರ್ಶಿ, ಗುರುರಾಜ ಮಾತನಾಡಿದರು.
ಮನವಿ ಪತ್ರವನ್ನು ಕಂದಾಯ ಇಲಾಖೆಯ ಅಧಿಕಾರಿ ಬಸವರಾಜ ಅವರ ಮೂಲಕ ಉಪವಿಭಾಗ ಸಹಾಯಕ ಆಯುಕ್ತರಿಗೆ ಸಲ್ಲಿಸಿದರು.
ರಾಜ್ಯ ಮಹಿಳಾ ಒಕ್ಕೂಟದ ಪದಾಧಿಕಾರಿಗಳಾದ ಲಕ್ಷ್ಮಿ, ಮಲ್ಲಮ್ಮ, ಮರಿಯಮ್ಮ, ಸಂತೋಷಮ್ಮ, ಬಸಮ್ಮ, ಶಾಂಬವಿ, ಈರಮ್ಮ, ಪಾರ್ವತಿ, ಅಕ್ಕಮ್ಮ ಸೇರಿದಂತೆ ಇತರರು ಉಪಸ್ಧಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.