ADVERTISEMENT

ಮಹಿಳೆಯರ ಸಬಲೀಕರಣ ಅಗತ್ಯ: ಕವಿತಾ ಮಿಶ್ರಾ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 11:10 IST
Last Updated 11 ಮಾರ್ಚ್ 2022, 11:10 IST
ಕವಿತಾಳದ ಎಸ್‌ಬಿಐ ಬ್ಯಾಂಕ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ರೈತ ಮಹಿಳೆ ಕವಿತಾ ಮಿಶ್ರಾ ಕೇಕ್ ಕತ್ತಿರಿಸುವ ಮೂಲಕ ಉದ್ಘಾಟಿಸಿದರು
ಕವಿತಾಳದ ಎಸ್‌ಬಿಐ ಬ್ಯಾಂಕ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ರೈತ ಮಹಿಳೆ ಕವಿತಾ ಮಿಶ್ರಾ ಕೇಕ್ ಕತ್ತಿರಿಸುವ ಮೂಲಕ ಉದ್ಘಾಟಿಸಿದರು   

ಕವಿತಾಳ: ‘ಸರ್ಕಾರದ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು’ ಎಂದು ರೈತ ಮಹಿಳೆ ಕವಿತಾ ಮಿಶ್ರಾ ಹೇಳಿದರು.

ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.

ಬೀದಿ ಬದಿ ವ್ಯಾಪಾರಿಗಳು, ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರು ಮತ್ತು ಕೃಷಿಕ ಮಹಿಳೆಯರಿಗೆ ವ್ಯವಸ್ಥಾಪಕ ಉಮೇಶ ವಡ್ಡರ್‍ ಸಾಲ ಮಂಜುರಾತಿ ಚೆಕ್‍ ವಿತರಿಸಿದರು.

ADVERTISEMENT

ಶೃತಿ, ಇಸ್ಮಾಯಿಲ್ ಮತ್ತು ಸ್ವ ಸಹಾಯ ಗುಂಪಿನ ತಿಮ್ಮಮ್ಮ ಭೋವಿ ಮತ್ತತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.