ADVERTISEMENT

ರಾಯಚೂರು | ಯುವಕರನ್ನು ಸರಿ ದಾರಿಗೆ ತರುವ ಸಾಹಿತ್ಯ ರಚನೆಯಾಗಲಿ: ಈರಣ್ಣ ಕೋಸಗಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 8:05 IST
Last Updated 26 ಜನವರಿ 2026, 8:05 IST
ರಾಯಚೂರಿನ ಕನ್ನಡ ಭವನದಲ್ಲಿ ಭಾನುವಾರ ‌ನಡೆದ ಕಾರ್ಯಕ್ರಮದಲ್ಲಿ ಪೃಥ್ವಿರಾಜ್ ಎನ್. ಸಾದಲಿ ರಚಿತ ‘ನದಿ ಸೇತುವೆ’ ಗಜಲ್ ಕವನ ಸಂಕಲನ ಬಿಡುಗಡೆ ಮಾಡಲಾಯಿತು
ರಾಯಚೂರಿನ ಕನ್ನಡ ಭವನದಲ್ಲಿ ಭಾನುವಾರ ‌ನಡೆದ ಕಾರ್ಯಕ್ರಮದಲ್ಲಿ ಪೃಥ್ವಿರಾಜ್ ಎನ್. ಸಾದಲಿ ರಚಿತ ‘ನದಿ ಸೇತುವೆ’ ಗಜಲ್ ಕವನ ಸಂಕಲನ ಬಿಡುಗಡೆ ಮಾಡಲಾಯಿತು   

ರಾಯಚೂರು: ‘ಇವತ್ತಿನ ಕೆಲ ಯುವಕರು ತಿಳಿವಳಿಕೆ ಕೊರತೆಯಿಂದಾಗಿ ದುಶ್ಚಟಗಳ ದಾಸರಾಗಿ ದಾರಿ ತಪ್ಪುತ್ತಿದ್ದಾರೆ. ಅಂಥವರನ್ನು ಸರಿದಾರಿಗೆ ತರುವಂತಹ ಕೃತಿಗಳನ್ನು ಹೊರ ತರುವ ಮೂಲಕ ತಿದ್ದುವ ಕೆಲಸ ಆಗಬೇಕಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಈರಣ್ಣ ಕೋಸಗಿ ಅಭಿಪ್ರಾಯಪಟ್ಟರು.

ಇಲ್ಲಿಯ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ತಾಲ್ಲೂಕು ಘಟಕದ ಆಶ್ರಯದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪೃಥ್ವಿರಾಜ್ ಎನ್.ಸಾದಲಿ ರಚಿತ ‘ನದಿ ಸೇತುವೆ’ ಗಜಲ್ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.

‘ಶಿಕ್ಷಕರೂ ಆಗಿರುವ ಪೃಥ್ವಿರಾಜ್ ಎನ್.ಸಾದಲಿ ಅವರು ಗಜಲ್ ಕವನ ಸಂಕಲನ ಹೊರ ತಂದಿದ್ದಾರೆ. ಮೊದಲ ಬಾರಿಗೆ ಅವರು ಕೃತಿ ರಚನೆ ಮಾಡಿದ್ದು, ಸಾಹಿತ್ಯಾಸಕ್ತಿಗೆ ಪ್ರೇರಣೆ ನೀಡಿದೆ. ಈ ಗಜಲ್ ಸಂಕಲನ ನೋವಿನ ಅನುಭವಗಳನ್ನು ವ್ಯಕ್ತಪಡಿಸುತ್ತದೆ’ ಎಂದು ಹೇಳಿದರು.

‘ಸಾಕಷ್ಟು ಗಜಲ್ ಕವನ ಸಂಕಲನಗಳಲ್ಲಿ ಪ್ರೀತಿ, ಪ್ರೇಮವನ್ನು ಕಾಣಬಹುದು. ಆದರೆ, ಪೃಥ್ವಿರಾಜ್ ಅವರು ತಮ್ಮ ನೋವು, ಸಂಕಷ್ಟಗಳನ್ನು ಗಜಲ್ ರೂಪದಲ್ಲಿ ಇಳಿಸಿದ್ದಾರೆ’ ಎಂದು ತಿಳಿಸಿದರು.

ಹಿರಿಯ ಸಾಹಿತಿ ಮಂಡಲಗಿರಿ ಪ್ರಸನ್ನ ಕೃತಿ ಪರಿಚಯಿಸಿದರು.

ಹಿರಿಯ ಸಾಹಿತಿ ವೀರ ಹನುಮಾನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲೇಶ ನಾಯಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣ ಶಾವಂತಗೇರಿ, ಸಾಹಿತಿ ತಾಯರಾಜ್ ಮರ್ಚಟಾಳ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಬಿ.ವಿಜಯೇಂದ್ರ, ಕೃತಿಯ ಲೇಖಕ ಪೃಥ್ವಿರಾಜ್ ಎನ್.ಸಾದಲಿ, ಚಂದ್ರಶೇಖರ ರೆಡ್ಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT