
ಪ್ರಜಾವಾಣಿ ವಾರ್ತೆ
ಮುದಗಲ್: ಸಮೀಪದ ಖೈರವಾಡಗಿ ಗ್ರಾಮದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಪರಶುರಾಮ ಗುಂಡಪ್ಪ (20) ನಾಪತ್ತೆಯಾಗಿದ್ದಾರೆ.
ಗ್ರಾಮದ 15 ಜನ ಸ್ನೇಹಿತರು ಸೇರಿ ಈಜಾಡಲು ಹೋಗಿದ್ದರು. 14 ಜನ ಈಜಾಡುತ್ತ ಮೇಲೆ ಬಂದಿದ್ದು ಪರಶುರಾಮ ನಾಪತ್ತೆಯಾಗಿದ್ದಾರೆ.
ಅಗ್ನಿಶಾಮಕ ದಳದವರು ಹಾಗೂ ಮುದಗಲ್ ಪೊಲೀಸ್ ಠಾಣೆ ಪಿಎಸ್ಐ ವೆಂಕಟೇಶ ಮಾಡಗೇರಿ ಇನ್ನಿತರರು ಸ್ಥಳಕ್ಕೆ ಆಗಮಿಸಿ ಯುವಕನ ಪತ್ತೆಗಾಗಿ ಶೋಧ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.