ADVERTISEMENT

ಅಧಿಕಾರಿಗಳ ವಿರುದ್ಧ ಕ್ರಮ: ಎಚ್ಚರಿಕೆ

ಅಂಗವಿಕಲರ ಸೌಲಭ್ಯ ವಿತರಣೆಯಲ್ಲಿ ಲೋಪ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 10:06 IST
Last Updated 20 ಡಿಸೆಂಬರ್ 2013, 10:06 IST

ರಾಮನಗರ: ‘ಅಂಗವಿಕಲರಿಗೆ ಸರ್ಕಾರ ನೀಡಿರುವ ಸವಲತ್ತು, ಸಲಕರಣೆಗಳನ್ನು ವಿತರಿಸಲು ಜಿಲ್ಲೆಯ ಬಹುತೇಕ ಇಲಾ ಖೆಗಳು ವಿಫಲಗೊಂಡಿರುವುದು ತಲೆ ತಗ್ಗಿಸುವ ವಿಚಾರ’ ಎಂದು ಜಿಲ್ಲಾಧಿ ಕಾರಿ ಡಾ.ಡಿ.ಎಸ್‌.ವಿಶ್ವನಾಥ್‌ ಅಸಮಾ ಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಅಂಗವಿಕಲರ ಸ್ಥಿತಿಗತಿ ಮತ್ತು ಅವರಿಗೆ ಸರ್ಕಾರ ಕೈಗೊಂಡಿ ರುವ ಕಾರ್ಯಕ್ರಮಗಳ ಅನುಷ್ಟಾನ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗ ಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ  ಮಾತನಾಡಿದರು.

‘ಅಂಗವಿಕಲರ ಬಗ್ಗೆ ಮಾನವೀಯತೆ ಮೆರೆದು ಅವರಿಗೆ ಸಿಗಬೇಕಾದ ಸೌಲಭ್ಯ ಗಳನ್ನು ವಿತರಿಸಬೇಕು. ಈ ಕಾರ್ಯ ದಲ್ಲಿ ಲೋಪ ಆದರೆ ಸಂಬಂಧಿಸಿದ ಅಧಿಕಾ ರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದು ಕೊಳ್ಳಲು ಹಿಂಜರಿಯುವುದಿಲ್ಲ’ ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ವಿವಿಧ ಇಲಾಖೆಗಳು ಅಂಗವಿಕಲರಿಗೆ ನೀಡಿರುವ ಸೌಲಭ್ಯಗಳ ಸಮರ್ಪಕ ಮಾಹಿತಿಯನ್ನು ಒದಗಿಸಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಚಂದ್ರ ಅವರು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು. ಈ ಸಂಬಂಧ ವಾರದೊಳಗೆ ಎಲ್ಲಾ ಇಲಾಖೆಗಳಿಂದ ಸಮಗ್ರ ಮಾಹಿ ತಿಯನ್ನು ಸಂಗ್ರಹಿಸಿ ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಅವರು ವಿವಿಧ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಿರ್ಲಕ್ಷಿಸಿದರೆ ಕ್ರಮ: ಇಲಾಖೆಗಳ ಸಂಬಳ, ಕಚೇರಿ ವೆಚ್ಚ ಆಡಳಿತಾತ್ಮಕ ವೆಚ್ಚದ ಅನುದಾನವನ್ನು ಹೊರತು ಪಡಿಸಿ ಇತರೆ ಎಲ್ಲಾ ಅನುದಾನದಲ್ಲಿ ಶೇ 3 ರಷ್ಟು ಮೀಸಲಿರಿಸಬೇಕು. ಈ ಹಣವನ್ನು ಅಂಗವಿಕರಿಗೆ ಸರ್ಕಾರ ಒದಗಿಸಿರುವ ಪಟ್ಟಿ ರೀತಿಯಲ್ಲಿಯೇ ಸೌಲಭ್ಯ ಸಲಕರಣೆಗಳನ್ನು ಒದಗಿಸಲು ಬಳಸಬೇಕು. ಯಾವುದೇ ಇಲಾಖೆ ಅಧಿಕಾರಿಗಳು ನಿರ್ಲಕ್ಷಿಸಿದ್ದಲ್ಲಿ  ಅವರ ಕೇಂದ್ರ ಕಚೇರಿಗೆ ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸು ಮಾಡು ವುದಾಗಿ ಎಚ್ಚರಿಸಿದರು.

ಕನಕಪುರದ ಜನಪ್ರಿಯ ಅಂಗವಿಕಲರ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ತಾಲ್ಲೂಕು ವೈದ್ಯಾಧಿ ಕಾರಿಗಳು ಅಂಗವಿಕಲರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಪ್ರಮಾಣ ಪತ್ರ ನೀಡಲು ಹಾಗೂ ಪರೀಕ್ಷಿಸಲು ಕ್ರಮ ತೆಗೆದು ಕೊಳ್ಳುತ್ತಿಲ್ಲ. ಶಿಕ್ಷಣ ಇಲಾಖೆಯು ಮಕ್ಕಳಿಗೆ ಬೇಕಿರುವ ಸಲಕರಣೆಗಳನ್ನು ನೀಡದೇ ಬೇರೆ ಸಲಕರಣೆಗಳನ್ನು ನೀಡುತ್ತಿದೆ. ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿ ಮತ್ತು ಬಸ್ ನಿಲ್ದಾಣದಲ್ಲಿ  ವ್ಯವಸ್ಥೆ ಹಾಗೂ ಶೌಚಾಲಯ ವ್ಯವಸ್ಥೆ ಇಲ್ಲದಿರುವುದರಿಂದ ಅಂಗವಿಕಲರಿಗೆ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು. ಪ್ರತಿ ಮೂರು ತಿಂಗಳಿಗೊಮ್ಮೆ ಇಲಾಖಾಧಿಕಾರಿಗಳ ಸಭೆ ಕರೆದು ಪ್ರಗತಿ ಪರಿಶೀಲಿಸುತ್ತೇನೆ ಎಂದರು. ಅಲ್ಲದೆ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಂಗವಿಕ ಲರನ್ನು ಪರೀಕ್ಷಿಸಿ, ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಕಲ್ಪಿಸುವಂತೆ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಘುನಾಥ್ ಅವರಿಗೆ ಸೂಚಿಸಿದರು.

ಗೈರು ಹಾಜರಾದವರಿಗೆ ನೋಟಿಸ್‌:
ಅಂಗವಿಕಲರ ಸಮಸ್ಯೆಗಳು ಗಂಭೀರ ವಾಗಿದ್ದು, ಅವರ ನೋವಿಗೆ ಸ್ಪಂದಿಸ ಬೇಕಾದದ್ದು ನಮ್ಮ ಕರ್ತವ್ಯ. ಈ ಸಭೆಗೆ ಗೈರು ಹಾಜರಾಗಿ ಮಾನವೀಯತೆ ಮರೆತ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಅವರು ನಿರ್ದೇಶನ ನೀಡಿ ದರು. ಜಿ.ಪಂ ಮುಖ್ಯ ಯೋಜನಾ ಧಿಕಾರಿ ಧನುಷ್‌, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಬ್ಯಾಲಾ ನಾಯಕ್, ಜಂಟಿ ಕೃಷಿ ನಿರ್ದೇಶಕ ಅಣ್ಣಯ್ಯ, ಜಿಲ್ಲಾ ಅಂಗವಿ ಕಲರ ಕಲ್ಯಾಣಾಧಿಕಾರಿರಾಮ ಚಂದ್ರಯ್ಯ, ಜನಪ್ರಿಯ ಅಂಗವಿಕಲರ ಒಕ್ಕೂಟದ ಪದಾಧಿಕಾರಿ ನಾಗರಾಜ್, ಸಿದ್ದರಾಜು  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.