ADVERTISEMENT

ಎಲ್ಲ ಧರ್ಮಗಳ ಉದ್ದೇಶ ಸಹಬಾಳ್ವೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2012, 19:30 IST
Last Updated 1 ಏಪ್ರಿಲ್ 2012, 19:30 IST

ಚನ್ನಪಟ್ಟಣ: ಇಸ್ಲಾಂ ಅನುಯಾಯಿಗಳೆಲ್ಲ ಭಯೋತ್ಪಾದಕರು ಎಂಬ ಭಾವನೆ ತೊಲಗಬೇಕು ಎಂದು ದಾವಣಗೆರೆಯ ಇಬ್ರಾಹಿಂ ಸಖಾಫಿ ಸಾಹೇಬ್ ಅಭಿಪ್ರಾಯಪಟ್ಟರು.

ಪಟ್ಟಣದ ಆಖಿಲ್ ಷಾಹಿ ದರ್ಗಾ ಆವರಣದಲ್ಲಿ ಮುಸ್ಲಿಂ ಡೆವಲಪ್‌ಮೆಂಟ್ ಫೋರಂ ಆಯೋಜಿಸಿದ್ದ `ಸಾಮಾಜಿಕ ಪರಿವರ್ತನೆ- ಇಸ್ಲಾಂ ಧರ್ಮ~ ಕುರಿತ ಚರ್ಚಾಗೋಷ್ಠಿಯಲ್ಲಿ ಮಾತನಾಡಿ, ಸಹಬಾಳ್ವೆಯೇ ಎಲ್ಲಾ ಧರ್ಮಗಳ ಗುರಿ. ಆದರೆ ಸಮಾಜದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ತಾರತಮ್ಯ ಬೆಳೆದಿದೆ ಎಂದು ವಿಷಾದಿಸಿದರು.

ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಸಯ್ಯದ್‌ವಾಡಿ ಜಾಮಿಯ ಮಸೀದಿ ಮುಖ್ಯಸ್ಥ ಸಿಖ್ಖಂದರ್ ಆಲಿಖಾನ್, ಆಲ್ ಇಂಡಿಯಾ ಮಿಲ್ಲಿ ಫೆಡರೇಷನ್‌ನ ಮೌಲಾನ್‌ನ ಮುಫ್ತಿ ಆರ್ಶದ್ ಬಾಖರ್ ಸಾಹೇಬ್, ವಿರಕ್ತ ಮಠದ ಶಿವರುದ್ರ ಸ್ವಾಮೀಜಿ, ತಹಶೀಲ್ದಾರ್ ಅರುಣಪ್ರಭ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ, ಬಮುಲ್ ನಿರ್ದೇಶಕ ಎಸ್. ಲಿಂಗೇಶ್‌ಕುಮಾರ್, ವಕೀಲರ ಸಂಘದ ಅಧ್ಯಕ್ಷ ಜೆ.ಟಿ.ಪ್ರಕಾಶ್, ಪೌರಾಯುಕ್ತ ರಾಮಚಂದ್ರಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.