ADVERTISEMENT

ಕಾಂಗ್ರೆಸ್‌ ಕಾರ್ಯಕರ್ತರ ಬೈಕ್‌ ಜಾಥಾ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2014, 8:27 IST
Last Updated 18 ಫೆಬ್ರುವರಿ 2014, 8:27 IST
ಮಾಗಡಿ ರಾಹುಲ್ ಗಾಂಧಿ ರೋಡ್ ಷೋನಲ್ಲಿ ಭಾಗವಹಿಸಲು ಮಾಗಡಿಯ ಯುವ ಕಾಂಗ್ರೆಸ್ ಕಾರ್ಯಕರ್ತರು ತೆರಳುತ್ತಿದ್ದ ಬೈಕ್ ಜಾಥಾಕ್ಕೆ ಕೆಪಿಸಿಸಿ ಸದಸ್ಯ ಎ.ಮಂಜುನಾಥ ಚಾಲನೆ ನೀಡಿದರು
ಮಾಗಡಿ ರಾಹುಲ್ ಗಾಂಧಿ ರೋಡ್ ಷೋನಲ್ಲಿ ಭಾಗವಹಿಸಲು ಮಾಗಡಿಯ ಯುವ ಕಾಂಗ್ರೆಸ್ ಕಾರ್ಯಕರ್ತರು ತೆರಳುತ್ತಿದ್ದ ಬೈಕ್ ಜಾಥಾಕ್ಕೆ ಕೆಪಿಸಿಸಿ ಸದಸ್ಯ ಎ.ಮಂಜುನಾಥ ಚಾಲನೆ ನೀಡಿದರು   

ಮಾಗಡಿ: ಸಚಿವ ಡಿ.ಕೆ.ಶಿವಕುಮಾರ್ ಭಾವಚಿತ್ರವಿರುವ ಕೈ ಗಡಿಯಾರ ಮತ್ತು ಟೀ ಶರ್ಟ್‌ ಗಳನ್ನು ಕೆಪಿಸಿಸಿ ಸದಸ್ಯ ಎ.ಮಂಜುನಾಥ ವಿತರಿಸಿದರು. ಕುಣಿ­ಗಲ್ ಮಾರ್ಗವಾಗಿ ಮೈಸೂರಿಗೆ ತೆರಳು­ತ್ತಿದ್ದ ರಾಹುಲ್ ಗಾಂಧಿ ರೋಡ್ ಷೋ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾವಿರಾರು ಯುವ ಕಾಂಗ್ರೆಸ್ ಕಾರ್ಯ­ಕರ್ತರು ಬೈಕ್ ಜಾಥಾ ನಡೆಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ವಿ.­ಜಯ­ರಾಮು, ಜುಟ್ಟನಹಳ್ಳಿ ಜಯ­ರಾಮಯ್ಯ, ಪುರಸಭಾ ಮಾಜಿ ಅಧ್ಯಕ್ಷ­ರಾದ ರಂಗಹನುಮಯ್ಯ, ಪಿ.ವಿ.­ಸೀತಾರಾಂ, ಟಿ.ಭೋಗೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಶಶಾಂಕ್ ರೇವಣ್ಣ, ಉಪಾ­ಧ್ಯಕ್ಷ ಕಾರ್ತಿಕ್, ಪುರಸಭಾ ಸದಸ್ಯ­ರಾದ ಎಂ.ಎನ್.ಮಂಜುನಾಥ, ಎಂ.ಬಿ.­ಮಹೇಶ್, ಶಿವಕುಮಾರ್, ನರ­ಸಿಂಹಯ್ಯ, ನಯಾಜ್ ಅಹಮದ್, ಎಸ್.ಮಹದೇವ್ ಸೇರಿದಂತೆ ಇತರರು ಭಾಗ­ವಹಿ­ಸಿದ್ದರು.

ಬೈಕ್ ಜಾಥಾದ ಅಂಗವಾಗಿ ಮಾಗಡಿ ಕುಣಿಗಲ್ ರಸ್ತೆಯಲ್ಲಿ ಅರ್ಧ ಗಂಟೆಯವರೆಗೆ ರಸ್ತೆ ತಡೆ ಉಂಟಾಗಿ ಸಂಚಾರಕ್ಕೆ ತೊಂದರೆ­ಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.