ADVERTISEMENT

‘ಕ್ಷೇತ್ರದ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು’

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 9:02 IST
Last Updated 25 ಅಕ್ಟೋಬರ್ 2017, 9:02 IST

ರಾಮನಗರ: ‘ರೇವಣಸಿದ್ದೇಶ್ವರ ಕ್ಷೇತ್ರದಲ್ಲಿ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸುವ ಜೊತೆಗೆ ಇದನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡಲಾಗುವುದು’ ಎಂದು ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆರ್. ರೇಣುಕಾಪ್ರಸಾದ್ ತಿಳಿಸಿದರು.

ತಾಲ್ಲೂಕಿನ ಅವ್ವೇರಹಳ್ಳಿಯ ಶ್ರೀ ರೇವಣಸಿದ್ದೇಶ್ವರ ದೇವಾಲಯದ ಮೇಲುಸ್ತುವಾರಿ ಮತ್ತು ಆಡಳಿತಕ್ಕಾಗಿ ನೇಮಿಸಿರುವ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಮಂಗಳವಾರ ಅವಿರೋಧ ಆಯ್ಕೆಯಾದ ಸಂದರ್ಭದಲ್ಲಿ ಸಾರ್ವಜನಿಕರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಶ್ರೀ ಕ್ಷೇತ್ರವು ಚಾರಣ ಪ್ರಿಯರ ಸ್ವರ್ಗವಾಗಿ, ತನ್ನ ಪ್ರಕೃತಿ ಸಿರಿಯಿಂದಾಗಿ ಪ್ರಸಿದ್ಧಿಯಾಗಿದೆ. ದಿನನಿತ್ಯ ಇಲ್ಲಿಗೆ ಬರುವ ಸಾವಿರಾರು ಭಕ್ತರಿಗೆ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು' ಎಂದರು.

ADVERTISEMENT

ವ್ಯವಸ್ಥಾಪನಾ ಸಮಿತಿ ಸದಸ್ಯ ದೇವರದೊಡ್ಡಿ ಗೋಪಾಲನಾಯ್ಕ ಮಾತನಾಡಿ ‘ಭಕ್ತರಿಗೆ ವಸತಿ, ಕುಡಿಯುವ ನೀರು ಮೊದಲಾದ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಸ್ವಚ್ಚತೆಗೆ ಆದ್ಯತೆ ಕೊಟ್ಟು ಸುಂದರ ತೀರ್ಥಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು’ ಎಂದರು.

‘ಸಮಿತಿಯ ಸದಸ್ಯರು ಸಂಭಂಧಪಟ್ಟ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆ ಚರ್ಚಿಸಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಪಡೆದು ಕೆಲಸ ಮಾಡಬೇಕು’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷ ಎಲ್. ಚಂದ್ರಶೇಖರ್ ಸಲಹೆ ನೀಡಿದರು.

ದೇವಾಲಯದ ಆಡಳಿತಾಧಿಕಾರಿ ಮಂಗಳಮ್ಮ, ಪ್ರಧಾನ ಅರ್ಚಕ ವಿಜಯಕುಮಾರ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅವ್ವೇರಹಳ್ಳಿ ನಾಗೇಂದ್ರ, ಪ್ರಭಾ ಸತೀಶ್, ದೇವರದೊಡ್ಡಿ ಗೋಪಾಲನಾಯ್ಕ, ತೆಂಗಿನಕಲ್ಲು ಸರಸ್ವತಿ ಕೃಷ್ಣಯ್ಯ, ಕೋಟಹಳ್ಳಿ ಹೊನ್ನದಾಸೇಗೌಡ, ಹುಲಿಕೆರೆ ಪುಟ್ಟಮಾದಯ್ಯ, ನೆಲಮಲೆ ರಾಜು, ಮುಖಂಡರಾದ ನೆಲಮಲೆ ನಟರಾಜ್, ಅಮ್ಮನಪುರದೊಡ್ಡಿ ಲಿಂಗರಾಜು, ಗುನ್ನೂರು ಶಂಕರ್, ಸಿದ್ದರಾಜು, ಕುರುಬಹಳ್ಳಿದೊಡ್ಡಿ ಡೈರಿ ಪ್ರಕಾಶ್, ಕವಣಾಪುರ ಅಶ್ವಥ್‌ಮಾರ್, ದೇವರದೊಡ್ಡಿ ಚಂದ್ರಾನಾಯ್ಕ, ರಾಮಣ್ಣನಾಯ್ಕ, ಕೋಟಹಳ್ಳಿ ಡೈರಿ ವೆಂಕಟಾಚಲಯ್ಯ, ಹುಲಿಕೆರೆ ಕುಮಾರ್, ಅವ್ವೇರಹಳ್ಳಿ ರೇವೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.