ADVERTISEMENT

ಡಿಕೆಶಿ–ಬೇಗ್ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

ರಾಮನಗರ ಜಿಲ್ಲೆಯಲ್ಲಿ ರಸ್ತೆಗಿಳಿದ ಬಿಜೆಪಿ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 9:13 IST
Last Updated 7 ಜನವರಿ 2014, 9:13 IST

ರಾಮನಗರ: ಸಚಿವ ಡಿ.ಕೆ.ಶಿವಕು ಮಾರ್ ಮತ್ತು ರೋಷನ್ ಬೇಗ್‌ ಅವ ರನ್ನು ತಕ್ಷಣವೇ ಸಂಪುಟದಿಂದ ಕೈಬಿಡು ವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಬೇಕು ಎಂದು ರಾಜ್ಯಪಾಲರನ್ನು ಒತ್ತಾಯಿಸಿ ಬಿಜೆಪಿಯ ಜಿಲ್ಲಾ ಘಟಕದ ಪದಾಧಿ ಕಾರಿಗಳು ನಗರದ ಐಜೂರು ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಸಂಪುಟದಲ್ಲಿ ಕಳಂಕಿತರಿಗೆ ಸ್ಥಾನವಿಲ್ಲ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಕಳಂಕಿತರಾಗಿರುವ ಡಿ.ಕೆ.ಶಿವ ಕುಮಾರ್ ಮತ್ತು ರೋಷನ್ ಬೇಗ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ತಮ್ಮ ಧೋರಣೆ ಬಯಲು ಮಾಡಿದ್ದಾರೆ ಎಂದು  ಪ್ರತಿಭಟನಾಕಾರರು ಟೀಕಿ ಸಿದರು.

ಕಳಂಕ ಹೊತ್ತ ಸಂತೋಷ್ ಲಾಡ್‌ ಅವರನ್ನು ಸಂಪುಟದಿಂದ ಕೈಬಿಟ್ಟ ಸಿದ್ದರಾ ಮಯ್ಯ ಇದೀಗ ಡಿ.ಕೆ.ಶಿವಕುಮಾರ್ ಮತ್ತ ರೋಷನ್ ಬೇಗ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವ ಕ್ರಮದ ಬಗ್ಗೆ ಸಿಎಂ ಸಿದ್ದರಾಮಯ್ಯ ಸಾರ್ವಜ ನಿಕರಿಗೆ ಉತ್ತರ ಹೇಳಬೇಕಾಗಿದೆ.

ಅಕ್ರಮ ಗಣಿಗಾರಿಕೆಯ ಆರೋಪ ಹೊರೆಸಿ ಬಿಜೆಪಿ ಸರ್ಕಾರದ ವಿರುದ್ಧ ಬಳ್ಳಾರಿ ವರೆಗೆ ಪಾದಯಾತ್ರೆ ಮಾಡಿದ್ದ ಸಿದ್ದರಾ ಮಯ್ಯ ಇಬ್ಬರು ಕಳಂಕಿತರನ್ನು ಸಂಪು ಟಕ್ಕೆ ಸೇರಿಸಿಕೊಂಡಿರುವುದನ್ನು ತಮ್ಮ ಪಕ್ಷ ವಿರೋಧಿಸುತ್ತದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ನಾಗರಾಜು ತಿಳಿಸಿದರು.

ಮಾತು ಕೃತಿಗಳಲ್ಲಿ ಯಾವಾಗಲೂ ಭಿನ್ನವಾಗಿ ನಡೆದು ಕೊಳ್ಳುವ ಕಾಂಗ್ರೆಸ್ ಸಂಸ್ಕೃತಿಯನ್ನು ಮುಖ್ಯಮಂತ್ರಿ ಸಿದ್ದರಾ ಮಯ್ಯ ಚೆನ್ನಾಗಿ ರೂಢಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ ಅವರು ತಮ್ಮದು ಸ್ವಚ್ಛ ಸಂಪುಟ ಎಂದು ಹೇಳಿಕೊ ಳ್ಳುವುದಾದರೆ ತಕ್ಷಣ ಈ ಇಬ್ಬರೂ ಕಳಂಕಿತ ಸಚಿವರನ್ನು ಕೈಬಿಡಿ ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರು ನಂತರ ಕಂದಾಯ ಭವನಕ್ಕೆ ತೆರಳಿ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಅವರಿಗೆ ಸಲ್ಲಿಸಿದರು.

ಜಿಲ್ಲಾ ಪ್ರಭಾರಿ ಶಿವಬೀರಪ್ಪ, ಸಹ ಪ್ರಭಾರಿ ಮುರಳಿ ಮೋಹನ್, ಬಿಜೆಪಿ ಪ್ರಮುಖರಾದ ರವಿಕುಮಾರ್ ಗೌಡ, ಜಿ.ವಿ.ಪದ್ಮನಾಭ, ಎಸ್.ಆರ್.ನಾಗ ರಾಜು, ಜಗದೀಶ್ ಪ್ರಸಾದ್, ರುದ್ರದೇವರು, ಬಿಜೆಪಿ ಮಂಜು, ರಾಮಂಜನೇಯ, ಮುರುಳಿ, ಪಿ.ವಿ.ಬದರಿನಾಥ್, ಗೋಪಾಲ್, ಗುಲಾಬ್ ಜಾನ್, ಮಂಜುಳಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.