ADVERTISEMENT

ಪವಿತ್ರ ಈದ್ ಮಿಲಾದ್ ಆಚರಣೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 18:30 IST
Last Updated 16 ಫೆಬ್ರುವರಿ 2011, 18:30 IST

ಮಾಗಡಿ: ಪವಿತ್ರ ಈದ್ ಮಿಲಾದ್ ಉನ್ನಬಿ ಅಂಗವಾಗಿ ಪಟ್ಟಣದಲ್ಲಿ ಮುಸ್ಲಿಂ ಬಾಂದವರು ಸಡಗರ ಸಂಭ್ರಮದಿಂದ ವಿಶೇಷವಾಗಿ ಹೊಸ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.  ಪರಸ್ಪರ ಶುಭಾಷಯಗಳನ್ನು ವಿನಿಮಯ ಮಾಡಿಕೊಂಡರು.

ಮೆರವಣಿಗೆ: ಪಟ್ಟಣದ ಹೊಸ ಮತ್ತು ಹಳೆ ಮಸೀದಿ ಮೊಹಲ್ಲಾಗಳಲ್ಲಿ ಪವಿತ್ರ ಮೆಕ್ಕಾ ಮದೀನಾ ಪ್ರತಿಕೃತಿಗಳನ್ನು ತಯಾರಿಸಿ ಅಲಂಕರಿಸಿ ಮೆರವಣಿಗೆ ನಡೆಸಿದರು. ಮಹಮದ್ ರಿಯಾಜ್ ಅಹಮದ್, ಪುರಸಭೆಯ ಸದಸ್ಯ ಇಲಿಯಾಜ್, ಇಸ್ಮಾಯಿಲ್, ವಾಸಿದ್, ಮಾಜಿ ಸದಸ್ಯ ಅಲ್ಲಾ ಭಕ್ಷ್, ಮುತುವಲ್ಲಿ,ರಿಯಾಜ್, ವಾಸಿಮ್, ಮಹಮದ್ ಇನಾಯತ್ ಉಲ್ಲಾ, ರಹಮತ್ ಉಲ್ಲಾಖಾನ್ ಮತ್ತು ಸೈಯದ್ ಸರ್ದಾರ್ ಮುತುವಲ್ಲಿ, ಹಜರತ್ ಗುಲಾಮ್ ನಫೀಸ್ ಹಭೀಬಿ, ಮಹಮದ್ ಝಾಕೀರ್ ಹುಸ್ಸೇನಿ, ಪೇಸ್ ಇಮಾಮ್ ಹಾಗೂ ಯುವಕರು ಭಾಗವಹಿಸಿದ್ದರು.

ಹಳೆ ಮಸೀದಿ ಮೊಹಲ್ಲಾದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಇರುವ ಪವಿತ್ರ ಮಸೀದಿ ಹಾಗೂ ವೃತ್ತಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.ಪಕ್ಕದಲ್ಲಿರುವ ಮಸೀದಿಯಲ್ಲಿ ಯುವಕರು ಪ್ರಾರ್ಥನೆ ಸಲ್ಲಿಸಿದರು.

ಸಿಹಿ ವಿತರಣೆ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಹೊಸ ಮಸೀದಿ ಮುಂದೆ  ಅಧ್ಯಕ್ಷ ಅನ್ಸರ್ ಪಾಷ ಸಿಹಿ ಮತ್ತು ಪಾನಕ ವಿತರಿಸಿ ಹಬ್ಬದ ಶುಭ ಕೋರಿದರು. ಕಾರ್ಯಕರ್ತರಾದ ಫಯಾಜ್ ಫಾಷ, ಅಬ್ದುಲ್ ರಹಮಾನ್, ತಾಜಿಮ್, ವಸೀಮ್, ನೂರುದ್ದೀನ್, ವಾಜಿದ್ ಇತರರು ಭಾಗವಹಿಸಿದ್ದರು.

ತಾಲ್ಲೂಕಿನಾದ್ಯಂತ ಇರುವ ಮುಸ್ಲಿಂ ಬಾಂದವರು ಈದ್ ಮಿಲಾದ್ ಉನ್ನಬಿಯ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿ ಮಹಮದ್ ಪೈಗಂಬರರ ಹುಟ್ಟು ಹಬ್ಬದ ವಿಚಾರವನ್ನು ಪರಸ್ಪರ ಹಂಚಿಕೊಂಡು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.