ADVERTISEMENT

ಭ್ರೂಣ ಹತ್ಯೆ: ಜಾಗೃತಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 6:00 IST
Last Updated 19 ಮಾರ್ಚ್ 2011, 6:00 IST

ಕನಕಪುರ: ಸ್ತ್ರೀಯರನ್ನು ಪೂಜ್ಯ ಮನೋಭಾವ ನೋಡುವ ಸಮಾಜ, ಹೆಣ್ಣು ಮಗುವನ್ನು ಪಾಪದ ದೃಷ್ಟಿಯಿಂದ ನೋಡುವುದು ವಿಷಾದಕರವೆಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಜೆ.ಜಿ.ನಾಯಕ್ ಹೇಳಿದರು. ತಾಲ್ಲೂಕಿನ ಕೋಡಿಹಳ್ಳಿ ಸಮುದಾಯ ಭವನದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಆರೋಗ್ಯ ಇಲಾಖೆ, ವಿವಿಧ ಅಭಿವೃದ್ದಿ ಇಲಾಖೆ ಹಾಗು ಸ್ವಯಂ ಸೇವಾ ಸಂಸ್ಥೆಗಳ ಸಹಬಾಗಿತ್ವದಲ್ಲಿ ಏರ್ಪಡಿಸಿದ್ದ ಹೆಣ್ಣುಭ್ರೂಣ ಹತ್ಯೆ ತಡೆಕಾಯ್ದೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 ಹೆಣ್ಣು ತಾಯಿಯಾಗಿ ಬೇಕು. ಹೆಂಡತಿಯಾಗಿ ಬೇಕು ಆದರೆ ಮಗಳಾಗಿ ಮಾತ್ರ ಬೇಡವಾಗಿದೆ. ಸಮಾಜದಲ್ಲಿ ಹೆಣ್ಣು ಬೇಡವೆಂಬ ಕಾರಣಕ್ಕೆ ಮಗು ಜನಿಸುವ ಮೊದಲೇ ಗರ್ಭಾವಸ್ಥೆಯಲ್ಲಿ ಹತ್ಯೆಮಾಡುತ್ತಾರೆ. ಪರಿಣಾಮ ಪ್ರಸ್ತುತ ಗಂಡು ಹೆಣ್ಣಿನ ಅನುಪಾತದಲ್ಲೇ ವ್ಯತ್ಯಾಸವಾಗಿದೆ ಎಂದರು.ಹೆಣ್ಣು ಭ್ರೂಣಹತ್ಯೆಯಲ್ಲಿ ಪುರುಷರಿಗಿಂತ ಮಹಿಳೆಯರದ್ದೇ ಹೆಚ್ಚಿನ ಪಾತ್ರವಿರುತ್ತದೆ. ಇದನ್ನು ತಡೆಗಟ್ಟಲು ಸರ್ಕಾರ ಕಠಿಣ ಕಾನೂನನ್ನು ರೂಪಿಸಿದೆ  ಅದು ಕಾರ್ಯಕತವಾಗಬೇಕಾದರೆ ಸರ್ಕಾರದೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.

ವಕೀಲ ಕೆ.ಸಿ.ಗೋಪಾಲಗೌಡ ಮಾತನಡಿ, ಲಿಂಗ ಪತ್ತೆ, ಹೆಣ್ಣು ಭ್ರೂಣ ಹತ್ಯೆ, ಇವುಗಳ ತಡೆಗೆ ಸರ್ಕಾರ ಕೈಗೊಂಡಿರುವ ಕ್ರಮ ಹಾಗೂ  ಶಿಕ್ಷೆಯ ಬಗ್ಗೆ ವಿವರಿಸಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ. ಜಿ.ಎಲ್. ಪದ್ಮ  ಮಾತನಾಡಿ, ಲಿಂಗ ಪತ್ತೆ, ಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧ. ಇದರಲ್ಲಿ ಪತ್ತೆ ಮಾಡುವವರು ಮತ್ತು ಮಾಡಿಸಿಕೊಳ್ಳುವವರು ಇಬ್ಬರೂ ತಪ್ಪಿತಸ್ಥರೇ. ಇಂಥ ಘಟನೆಗಳು ನಡೆದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗು ಸ್ತ್ರೀ ಶಕ್ತಿ ಗುಂಪಿನ ಸದಸ್ಯೆಯರು ಆರೋಗ್ಯ ಇಲಾಖೆಗಾಗಲಿ ಅಥವಾ ಸ್ಥಳೀಯ ಪೊಲೀಸರಿಗೆ ತಿಳಿಸಬೇಕೆಂದು ಸಲಹೆ ನೀಡಿದರು. ಕೋಡಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಎಚ್.ಕೆ.ರಮೇಶ್, ಡಾ. ತೇಜೋವತಮ್ಮ,  ಡಾ.ಜೆ. ವೀಣಾ, ಸಾಧನೆ ಸಂಸ್ಥೆ ಸಂಯೋಜಕ ನೀಲಿ ರಮೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.