ADVERTISEMENT

ಮಾಗಡಿ: ರಸ್ತೆ ಕಾಮಗಾರಿ ಅಪೂರ್ಣ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST

ಮಾಗಡಿ: ಪಟ್ಟಣದ ಮೂಲಕ ಹಾದು ಹೋಗಿರುವ ರಸ್ತೆವಿಸ್ತರಣೆ ಕಾಮಗಾರಿ ಆರಂಭವಾಗಿ 2 ವರ್ಷ ಕಳೆದರೂ ಸಹ ಪೂರ್ಣವಾಗಿಲ್ಲ. ವಾಹನಗಳ ಸಂಚಾರದಿಂದ ರಸ್ತೆಯಲ್ಲಿ ಏಳುವ ದೂಳು ನಾಗರೀಕರ ಪಾಲಿಗೆ ನರಕವಾಗಿದೆ.

ಹಳೆಮಸೀದಿ ಮೊಹಲ್ಲಾ, ಬಾಬು ಜಗಜೀವನ್ ರಾಮ್ ನಗರ, ಕಲ್ಯಾಬಾಗಿಲು, ಜ್ಯೋತಿನಗರ, ಸೋಮೇಶ್ವರ ಕಾಲೋನಿಯ ಬಹುತೇಕ ಜನತೆ ದೂಳಿನಿಂದ ತೀರಾ ಸಂಕಟಪಡುವಂತಾಗಿದೆ ಎಂದು  ಸಾರ್ವಜನಿಕರ ದೂರಿದ್ದಾರೆ.

ಇದರ ಜೊತೆಗೆ ಪಟ್ಟಣದಲ್ಲಿ ವಿದ್ಯುತ್ ಕಡಿತ ಜನತೆಯಲ್ಲಿ ಆತಂಕ ಮೂಡಿದೆ. ಸುತ್ತಲೂ ಬೆಟ್ಟಗುಡ್ಡಗಳಿಂದ ಆವೃತ್ತವಾಗಿ ಮಾಗಡಿಯಲ್ಲಿ ಕಳೆದ ಒಂದು ವಾರದಿಂದ ಬಿಸಿಲು ಹೆಚ್ಚಿದ್ದು ವಿದ್ಯುತ್ ಕಡಿತದಿಂದ ಕುಡಿಯುವ ನೀರಿಗೆ ತುಂಬಾ ತೊಂದರೆಯಾಗಿದೆ ಎಂದು ಜನತೆ ಆರೋಪಿಸದ್ದಾರೆ.

ಮುಖ್ಯರಸ್ತೆ, ರಾಮರಾಜ ಅರಸ್‌ರಸ್ತೆ, ರಾಮಮಂದಿರ ರಸ್ತೆ, ತಿರುಮಲ ರಸ್ತೆ, ಡಾ.ರಾಜಕುಮಾರ್ ರಸ್ತೆ, ಬಿ.ಕೆ ರಸ್ತೆ,ಗಾಣಿಗರ ಬೀದಿ ರಸ್ತೆ, ಬಸ್ ನಿಲ್ದಾಣದ ರಸ್ತೆಗಳನ್ನು ದುರಸ್ಥಿಪಡಿಸುವಂತೆ ನರಸಿಂಹಯ್ಯ ಆಗ್ರಹಪಡಿಸಿದ್ದಾರೆ.

ನಿಂತಿರುವ ರಸ್ತೆ ಕಾಮಗಾರಿ ಪ್ರಾರಂಬಿಸಿ, ನಿಗದಿತ ಸಮಯದೊಳಗೆ ಮುಗಿಸಿ ನಾಗರೀಕರಿಗೆ ನೆಮ್ಮದಿಯ ವಾತಾವರಣ ಮೂಡಿಸುವಂತೆ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿರುವುದಾಗಿ ಮಹಮದ್ ಅನ್ಸರ್ ಪಾಷಾ ಇತರರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.