ADVERTISEMENT

ಸುಲಭ ಸೇವೆಗೆ ತಂತ್ರಜ್ಞಾನ ಬಳಕೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 7:10 IST
Last Updated 8 ಜನವರಿ 2011, 7:10 IST

ಕನಕಪುರ: ಮಾಹಿತಿ ತಂತ್ರಜ್ಞಾನ ಯುಗದಲ್ಲಿ ನವೀನ ತಂತ್ರಜ್ಙಾನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಂಡುಪ್ರಗತಿ ಅದ್ಬುತವಾಗಿದೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ದೊಡ್ಡ ಅರಸಿನಕೆರೆ ಮಾಯಪ್ಪ ಹೇಳಿದರು. ಇಂಥ ಸೌಲಭ್ಯಗಳನ್ನು ಸರಳವಾಗಿ ಸಾರ್ವಜನಿಕರಿಗೆ ತಲುಪಿಸುವಲ್ಲಿ ವಿವಿಧ ಬ್ಯಾಂಕುಗಳು ಯಶಸ್ವಿಯಾಗಿವೆ ಎಂದು  ಎಂದು  ಅವರು ಹೇಳಿದರು.

ಪಟ್ಟಣದ ಎಂ.ಜಿ.ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‌ನ ದ್ವಿತೀಯ ಎ.ಟಿ.ಎಂ. ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೆಲಸಗಳ ಒತ್ತಡದಲ್ಲಿರುವ ಜನರಿಗೆ ಬ್ಯಾಮಕ್ ವ್ಯವಸ್ಥೆಯು ಸಮಸ್ಯೆಯಾಗಿದ್ದು ಬ್ಯಾಂಕಿನಲ್ಲಿ ಹಣಕಾಸಿನ ವ್ಯವಹಾರ ಮಾಡಲು ಸಮಯದ ಕೊರತೆಯಿದೆ. ಆದ್ದರಿಂದಲೇ ಗ್ರಾಹಕರ ಅನುಕೂಲ ಹಾಗೂ ವಹಿವಾಟು ಸರಳಗೊಳ್ಳುವುದಕ್ಕಾಗಿ ಬ್ಯಾಂಕುಗಳು ಎಂ.ಟಿ.ಎಂ.  ತೆರೆಯುತ್ತಿವೆ ಎಂದರು.

ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಎಂ.ಎಸ್.ರವೀಂದ್ರನಾಥ್ ಮಾತನಾಡಿ ಗ್ರಾಹಕರ ಅಗತ್ಯಗಳಿಗೆ ಶೀಘ್ರವಾಗಿ ಸ್ವಂದಿಸುವ ಮೈಸೂರು ಬ್ಯಾಂಕ್ ಮುಂಬರುವ  ದಿನಗಳಲ್ಲಿ ಎ.ಟಿ.ಎಂ.ಮೂಲಕವೇ ನಗದು ಹಾಗು ಚೆಕ್ ಡಿಪಾಸಿಟ್ ಸೌಲಭ್ಯ ಒದಗಿಸಲಿದೆ. ಎ.ಟಿ.ಎಂ. ಎನಿವೇರ್ ಬ್ಯಾಂಕಿಂಗ್ ನಮ್ಮ ದ್ಯಾಯವೆಂದರು.   ಬ್ಯಾಂಕಿನ ಗ್ರಾಹಕರಾದ ಮರಸಪ್ಪ ರವಿ, ಬೂದಿಗುಪ್ಪೆ ರವಿಕುಮಾರ್, ಹೆಚ್.ಎಸ್. ರಾಜಣ್ಣ, ಕೃಷ್ಣಮೂರ್ತಿ, ಆರತಿ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.