ADVERTISEMENT

ಹೈನೋದ್ಯಮದಿಂದ ರೈತರ ಬದುಕು ಹಸನು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 19:30 IST
Last Updated 22 ಅಕ್ಟೋಬರ್ 2011, 19:30 IST
ಹೈನೋದ್ಯಮದಿಂದ ರೈತರ ಬದುಕು ಹಸನು
ಹೈನೋದ್ಯಮದಿಂದ ರೈತರ ಬದುಕು ಹಸನು   

ಚನ್ನಪಟ್ಟಣ: ಗ್ರಾಮೀಣ ಜನತೆಗೆ ಉದ್ಯೋಗ ಕಲ್ಪಿಸುವ ಮೂಲಕ ರೈತರ ಬದುಕನ್ನು ಹಸನು ಮಾಡುತ್ತಿರುವ ಹೈನೋದ್ಯಮದಲ್ಲಿ ಮಹಿಳೆಯರು ಹೆಚ್ಚಿನ ಶ್ರಮ ವಹಿಸಬೇಕೆಂದು ಬಮೂಲ್ ನಿರ್ದೇಶಕ ಎಸ್. ಲಿಂಗೇಶ್‌ಕುಮಾರ್ ತಿಳಿಸಿದರು.

ತಾಲೂಕಿನ ಜಗದಾಪುರ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿ, ಗ್ರಾಮದ ಜನತೆಯ  ಹೆಚ್ಚಿನ ಸಂಖ್ಯೆಯಲ್ಲಿ ಹಾಲು ಉತ್ಪಾದನೆ ಕಾರ್ಯ ನಡೆಯಲಿ ಎಂದರು.

ಮಹಿಳೆಯರು ಹೈನೋದ್ಯಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದ್ದು, `ಶುದ್ದಹಾಲು ಪೂರೈಸುವ ಮೂಲಕ ಹಾಲು ಉತ್ಪಾದಕರ ಸಹಕಾರ ಸಂಘ~ವನ್ನು ಪ್ರಗತಿ ಪತದಲ್ಲಿ ಕೊಂಡೊಯ್ಯಬೇಕೆಂದರು.

ಮಹಿಳೆಯರು ಹೈನೋದ್ಯಮವನ್ನು ಮಾಡುವವುದರಿಂದ ಕುಟುಂಬ ನಿರ್ವಾಣೆಯ ಜೊತೆಗೆ ದೇಶದ ಪ್ರಗತಿ ಒಂದು ಭಾಗವಾಗಿ ಹೊರಹೊಮ್ಮತ್ತಿದ್ದಾರೆ ಎಂದು ಅವರು ತಿಳಿಸಿದ್ದರು.ರೈತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಬೆಂಗಳೂರು ಹಾಲು ಒಕ್ಕೂಟ ಅಮೃತಯೋಜನೆ, ಯಶಸ್ವಿನಿ ಯೋಜನೆ, ಗುಂಪು ವಿಮೆ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದ್ದು.
 
ಈ ಎಲ್ಲಾ ಯೋಜನೆಗಳು ಎಲ್ಲಾ ಗ್ರಾಮಕ್ಕೂ ದೊರೆಯಲಿದೆ ಎಂದರು. ಕಾರ್ಯಕ್ರಮದಲ್ಲಿ ಬಮೂಲ್ ವ್ಯವಸ್ಥಾಪಕ ಡಾ.ಎ.ಆರ್.ಚಂದ್ರಶೇಖರ್, ಉಪವ್ಯವಸ್ಥಾಪಕ ಮುನಿರಾಜು, ಡಾ.ಶ್ರಿಧರ್, ವಿಸ್ತರಣಾಧಿಕಾರಿಗಳಾದ ಶ್ರೀನಿವಾಸ್, ಮಹದೇವೇಗೌಡ, ಡಾ. ರಾಘವೇಂದ್ರ, ಬಿ.ವಿ.ಶಿವಪ್ರಸನ್ನ, ಜಗದಾಪುರ ಸಂಘದ ಅಧ್ಯಕ್ಷ ವೆಂಕಟೇಗೌಡ, ಗ್ರಾ.ಪಂ ಅಧ್ಯಕ್ಷ ಬಸವರಾಜು ಮುಂತಾ ದವರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.