ADVERTISEMENT

‘ಮೌಲ್ಯರಹಿತ ಶಿಕ್ಷಣ–ದುಷ್ಟ ಸಂತತಿಗೆ ಕಾರಣ’

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 9:50 IST
Last Updated 16 ಸೆಪ್ಟೆಂಬರ್ 2013, 9:50 IST

ಚನ್ನಪಟ್ಟಣ: ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ರಾಷ್ಟ್ರಪ್ರೇಮ, ಸೇವಾ ಮನೋಭಾವದ ವಿಷಯಗಳು ಕ್ಷೀಣಿಸಿ ರುವುದರಿಂದ ಸಮಾಜಘಾತುಕ ದುಷ್ಟ ಶಕ್ತಿಗಳ ಸಂತತಿ ಹೆಚ್ಚಾಗುತ್ತಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಧು ಸೂಧನಾಚಾರ್ಯಜೋಷಿ ಆತಂಕವ್ಯಕ್ತ ಪಡಿಸಿದರು.

ಭಾರತ್ ವಿಕಾಸ್ ಪರಿಷದ್ ಕಣ್ವ ಶಾಖೆಯು ಪಟ್ಟಣದ ಕೋಟೆಯ ವಿಶ್ವ ಕರ್ಮ ಸಮುದಾಯ ಭವನದಲ್ಲಿ ಇತ್ತೀ ಚೆಗೆ ಏರ್ಪಡಿಸಿದ್ದ ಕೌಟುಂಬಿಕ ಸಭೆ ಹಾಗೂ ಸನ್ಮಾನ, ಸಾಂಸ್ಕೃತಿಕ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ರಾಷ್ಟ್ರ ಪ್ರೇಮ, ರಾಷ್ಟ್ರಭಕ್ತಿ, ದೇಶಸೇವೆ, ತ್ಯಾಗ, ಸೇವೆ, ಅರ್ಪಣಾ ಮನೋಭಾವನೆ ಮುಂ ತಾದ ವಿಷಯಗಳು ಪಠ್ಯಪುಸ್ತಕ ಗಳಲ್ಲಿ ತುಂಬಿರುತ್ತಿದ್ದವು. ಆದರೆ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ  ಇವೆಲ್ಲವೂ ಕಣ್ಮರೆಯಾಗಿರುವುದರಿಂದ ವಿದ್ಯಾರ್ಥಿ ಗಳಲ್ಲಿ ದೇಶಭಕ್ತಿ, ತ್ಯಾಗ, ಸೇವೆ, ಸಮರ್ಪ ಣೆ ಮುಂತಾದ ಮನೋಭಾವನೆಗಳು ಕಡಿಮೆ ಯಾಗು ತ್ತಿವೆ. ಇದರ ಬದಲಾಗಿ ಸ್ವಾರ್ಥ, ಹಣ, ಕೋಮುವಾದ, ಉಗ್ರಗಾಮಿ ಚಟು ವಟಿಕೆ ಹೆಚ್ಚಾಗುತ್ತಿವೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ
ಎಂದರು.

ಅಧ್ಯಕ್ಷತೆ ವಹಿಸಿದ್ದ ಭಾರತ್ ವಿಕಾಸ್ ಪರಿಷದ್ ಕಣ್ವ ಶಾಖೆಯ ಅಧ್ಯಕ್ಷ ಎಚ್.ಮಂಜುನಾಥ್ ಮಾತನಾಡಿ, ಭಾರತ್‌ ವಿಕಾಸ್‌ ಪರಿಷತ್‌ ಸಂಪರ್ಕ, ಸಹಯೋಗ, ಸಂಸ್ಕಾರ, ಸೇವೆ, ಸಮರ್ಪ ಣೆ ಎಂಬ ಪಂಚತತ್ವಗಳ ಮೇಲೆ ನಿಸ್ವಾ ರ್ಥದಿಂದ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಹಲವಾರು ಸೇವಾ ಕಾರ್ಯಕ್ರಮಗಳ ಮೂಲಕ  ತನ್ನದೇ ಆದ ಸ್ಥಾನಮಾನ ಗಳಿಸಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾ.ವಿ.ಪ. ದಕ್ಷಿಣ ಪ್ರಾಂತ್ಯದ ಸಹ ಸಂಚಾಲಕಿ ರಾಜೇಶ್ವರಿ ಚಲುವಪ್ಪ, ತಾ.ಪಂ. ಮಾಜಿ ಅಧ್ಯಕ್ಷೆ ಶಾಂತಮ್ಮ, ಶಿಕ್ಷಕರಿಗೆ ಹಾಗೂ ಸಾಂಸ್ಕೃತಿಕ ಚಟುವಟಿ ಕೆಗಳಲ್ಲಿ ಭಾಗವಹಿಸಿದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ನಿವೃತ್ತ ಶಿಕ್ಷಕ ಸಿ.ಆರ್.ಚನ್ನಮಾದೇಗೌ ಡ, ಶಿಕ್ಷಕ ದಿನೇಶ್‌ ಅವರನ್ನು ಸನ್ಮಾನಿಸಿಲಾಯಿತು.

ಭಾ.ವಿ.ಪ. ಕೋಶಾಧ್ಯಕ್ಷ ಎಸ್.ಶಿವ ಲಿಂಗಯ್ಯ, ಪದಾಧಿಕಾರಿಗಳಾದ ಕಾಡ ಯ್ಯ, ಗುರುಮಾದಯ್ಯ, ಉಮೇಶ್, ವರದರಾಜು, ಕೆಂಪಯ್ಯ ಇದ್ದರು.

ಮುಖ್ಯಶಿಕ್ಷಕ ರಾಮಲಿಂಗಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾ.ವಿ.ಪ. ಮಾಜಿ ಅಧ್ಯಕ್ಷ ವಸಂತ್‌ ಕುಮಾರ್ ಸನ್ಮಾನಿತರ ಪರಿಚಯ ಮಾಡಿಕೊಟ್ಟರು. ಭಾ.ವಿ.ಪ. ಕಾರ್ಯ ದರ್ಶಿ ಟಿ.ಚನ್ನಪ್ಪ ಸ್ವಾಗತಿಸಿದರು. ಕೃಷ್ಣಮ್ಮ ನಿರೂಪಿಸಿದರು. ಗಾಯಕರಾದ ಶಾರದಾ ನಾಗೇಶ್, ವೆಂಕಟೇಶ್, ಸುರೇಶ್, ಉಮೇಶ್, ಪಾಪಣ್ಣ, ವರದರಾಜು ಸಾಂಸ್ಕೃ ತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.