ADVERTISEMENT

ಚಿಂಕೆ ಬೇಟೆ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 7:21 IST
Last Updated 10 ಫೆಬ್ರುವರಿ 2018, 7:21 IST
ಕನಕಪುರ ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ಬಂಧಿತರಾದ ಆರೋಪಿಗಳೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು
ಕನಕಪುರ ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ಬಂಧಿತರಾದ ಆರೋಪಿಗಳೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು   

ಕನಕಪುರ: ಹಲಗೂರು ವನ್ಯಜೀವಿ ವಲಯದ ಬಸವನಬೆಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿನ ದೊಡ್ಡಅರೆಕಲ್ಲು ಬಳಿ ಜಿಂಕೆ ಬೇಟೆಯಾಡಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಕನಕಪುರ ತಾಲ್ಲೂಕಿನ ಬೆಟ್ಟೇಗೌಡನದೊಡ್ಡಿ ಶಿವಲಿಂಗೇಗೌಡರ ಪುತ್ರ ರಾಜು, ಕನಕಪುರ ಚಂದ್ರೇಗೌಡರ ಮಗ ಚಲುವರಾಜು, ಹಲಗೂರು ಹೋಬಳಿ ಬ್ಯಾಡರಹಳ್ಳಿ ಗ್ರಾಮದ ಹುಚ್ಚೇಗೌಡರ ಮಕ್ಕಳಾದ ಮಾದೇಗೌಡ ಮತ್ತು ರಮೇಶ್‌, ಮಹದೇವ ಅವರ ಮಗ ಜಗದೀಶ, ಹಲಗೂರು ದೊಡ್ಡತಮ್ಮಯ್ಯರ ಮಗ ಗಿರೀಶ್‌ ಬಂಧಿತ ಆರೋಪಿಗಳು.

ನಾಡ ಬಂದೂಕು ಬಳಸಿ ಮೀಸಲು ಅರಣ್ಯ ಪ್ರದೇಶದಲ್ಲಿ ಚಿಂಕೆ ಬೇಟೆಯಾಡಿದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ADVERTISEMENT

ಬಂಧಿತರಿಂದ ಜಿಂಕೆ, ನಾಡ ಬಂದೂಕು, ಎರಡು ಮೋಟಾರ್‌ ಬೈಕ್‌, ಬೇಟೆಗೆ ಬಳಸಿದ್ದ ಮಾರಕಾಸ್ತ್ರ, ಮದ್ದುಗುಂಡು ವಶಕ್ಕೆ ಪಡೆದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎ.ಸಿ.ಎಫ್‌. ಕೆ.ಡಿ.ಶ್ರೀನಿವಾಸಯ್ಯ, ಆರ್‌.ಎಫ್‌.ಒ. ಕಿರಣ್‌ಕುಮಾರ್‌.ಎ, ಡಿ.ಆರ್‌.ಎಫ್‌.ಒ. ಪ್ರವೀಣ್‌ಕುಮಾರ್‌ ಎಸ್‌.ಪಿ, ಅರಣ್ಯ ರಕ್ಷಕರಾದ ವಿನಾಯಕ ಬೊಂಬಲೇಕರ, ಮಲ್ಲಿಗನಾಥ, ವಿನಯ ಉಮೇಶ ಇಟ್ನಾಳ, ನಿಂಗಪ್ಪ ಕರ್ನಾಳ, ಶ್ರೀಕಂಠೇಗೌಡ, ಮಾಯಪ್ಪ, ಶಿವನಂಜಯ್ಯ, ದೊಳ್ಳಯ್ಯ, ಮಲ್ಲೇಶ, ಚಿಕ್ಕರಾಜು ದಾಳಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.