ADVERTISEMENT

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಶೇ 64.90 ಮತದಾನ

​ಪ್ರಜಾವಾಣಿ ವಾರ್ತೆ
Published 3 ಮೇ 2019, 15:43 IST
Last Updated 3 ಮೇ 2019, 15:43 IST
   

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಕಳೆದ ಬಾರಿಗೆ ಹೋಲಿಕೆ ಮಾಡಿದಲ್ಲಿ ಈ ಬಾರಿ ಶೇ 1.55ರಷ್ಟು ಕಡಿಮೆ ಮತದಾನ ನಡೆದಿದೆ.

2014ರಲ್ಲಿ ಶೇ 66.45 ರಷ್ಟು ಮತದಾನಗೊಂಡಿದ್ದರೆ, 2019ರಲ್ಲಿ ಶೇ 64.90ಕ್ಕೆ ಕುಸಿತಗೊಂಡಿದೆ. ಒಟ್ಟು ಶೇ 1.55ರಷ್ಟು ಕಡಿಮೆ ಮತದಾನ ಆಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 12,87,524 ಪುರುಷರು , 12,09,276 ಮಹಿಳಾ ಮತದಾರರು, 341 ಇತರೆ ಹಾಗೂ 317 ಸೇವಾ ಮತದಾರರು ಸೇರಿದಂತೆ ಒಟ್ಟು 24,97,458 ಮತದಾರರಿದ್ದಾರೆ. ಆದರೆ, ಇದರಲ್ಲಿ 831019 ಪುರುಷರು , 789565 ಮಹಿಳಾ ಮತದಾರರು, 39 ಇತರೆ ಮತದಾರರು ಸೇರಿ ಒಟ್ಟು 16,20,623 ಮತಗಳು ಚಲಾವಣೆಗೊಂಡಿವೆ.

ಮತದಾರರು : ಕುಣಿಗಲ್ ಕ್ಷೇತ್ರದಲ್ಲಿ 1,90,992 ಮಂದಿ (96,670 -ಪುರುಷರು, 94,228 - ಮಹಿಳೆಯರು, 79 - ಸೇವಾ ಹಾಗೂ 15 ಇತರೆ), ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ 4,50,945 ಮತದಾರರು (2,35,471 - ಪುರುಷರು, 2,15,377 - ಮಹಿಳೆಯರು, 17 - ಸೇವಾ ಹಾಗೂ 80 - ಇತರೆ), ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 6,17,045 ಮಂದಿ (3,28,260 - ಪುರುಷರು, 2,88,649 - ಮಹಿಳೆಯರು, 34 - ಸೇವಾ ಹಾಗೂ 102 - ಇತರೆ ), ಆನೇಕಲ್ ಕ್ಷೇತ್ರದಲ್ಲಿ 363818 ಮಂದಿ (192447 - ಪುರುಷರು, 171286 - ಮಹಿಳೆಯರು, 85 - ಇತರೆ ), ಮಾಗಡಿ ಕ್ಷೇತ್ರದಲ್ಲಿ 2,25,312 ಮಂದಿ (1,13,547-ಪುರುಷರು, 1,11,673- ಮಹಿಳೆಯರು, 73 - ಸೇವಾ ಹಾಗೂ 19 ಇತರೆ ), ರಾಮನಗರದಲ್ಲಿ 2,09,878ಮಂದಿ(1,04,176-ಪುರುಷರು, 1,05,655- ಮಹಿಳೆಯರು, 23 - ಸೇವಾ ಹಾಗೂ 24- ಇತರೆ ), ಕನಕಪುರ ಕ್ಷೇತ್ರದಲ್ಲಿ 2,21,182 ಮಂದಿ (1,10,241 - ಪುರುಷರು, 1,10,902- ಮಹಿಳೆಯರು , 30 - ಸೇವಾ ಹಾಗೂ 09- ಇತರೆ ) ಹಾಗೂ ಚನ್ನಪಟ್ಟಣ ಕ್ಷೇತ್ರದಲ್ಲಿ 2,18,274 ಮಂದಿ (1,06,712 -ಪುರುಷರು, 1,11,506- ಮಹಿಳೆಯರು , 49 - ಸೇವಾ ಹಾಗೂ 07 -ಇತರೆ ) ಮತದಾರರು ಇದ್ದಾರೆ.

ADVERTISEMENT

ಚಲಾವಣೆಗೊಂಡ ಮತಗಳು : ಕುಣಿಗಲ್ ಕ್ಷೇತ್ರದಲ್ಲಿ 147193 ಮಂದಿ ಮತ ಚಲಾಯಿಸಿದ್ದಾರೆ. (74528 -ಪುರುಷರು, 72664 - ಮಹಿಳೆಯರು, 1 ಇತರೆ), ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ 241934 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು (124306 - ಪುರುಷರು, 117619 - ಮಹಿಳೆಯರು, 9 - ಇತರೆ), ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 377617 ಮಂದಿ (171956 - ಪುರುಷರು, 155656- ಮಹಿಳೆಯರು, 5 - ಇತರೆ ), ಆನೇಕಲ್ ಕ್ಷೇತ್ರದಲ್ಲಿ 212170 ಮಂದಿ ಮತ ಹಾಕಿದ್ದಾರೆ. (111296 - ಪುರುಷರು, 100857- ಮಹಿಳೆಯರು, 17- ಇತರೆ ), ಮಾಗಡಿ ಕ್ಷೇತ್ರದಲ್ಲಿ 175999 ಮಂದಿ ಹಕ್ಕು ಚಲಾಯಿಸಿದ್ದಾರೆ.

89233-ಪುರುಷರು, 86766- ಮಹಿಳೆಯರು, 00 ಇತರೆ ), ರಾಮನಗರದಲ್ಲಿ 162265ಮಂದಿ ಮತ ಹಾಕಿದ್ದಾರೆ. (82490-ಪುರುಷರು, 79774- ಮಹಿಳೆಯರು, 1- ಇತರೆ ), ಕನಕಪುರದಲ್ಲಿ 181831 ಮಂದಿ ಮತ ಚಲಾಹಿಸಿದ್ದಾರೆ. (92593 - ಪುರುಷರು, 89232- ಮಹಿಳೆಯರು , 36- ಇತರೆ ) ಹಾಗೂ ಚನ್ನಪಟ್ಟಣ ಕ್ಷೇತ್ರದಲ್ಲಿ 171614 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು (84617 -ಪುರುಷರು, 86997- ಮಹಿಳೆಯರು , 00 -ಇತರೆ ) ಮತದಾರರು ಮತಗಟ್ಟೆಗಳಿಗೆ ಬಂದಿದ್ದಾರೆ.

ಕಣದಲ್ಲಿದ್ದ ಅಭ್ಯರ್ಥಿಗಳು: ಅಶ್ವಥ್‌ನಾರಾಯಣಗೌಡ (ಬಿಜೆಪಿ) ಡಾ.ಚೆನ್ನಪ್ಪ ವೈ ಚಿಕ್ಕಹಾಗಡೆ (ಬಿಎಸ್ ಪಿ), ಡಿ.ಕೆ.ಸುರೇಶ್ (ಕಾಂಗ್ರೆಸ್), ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾದ ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಎನ್. ಕೃಷ್ಣಪ್ಪ, ರಿಪಬ್ಲಿಕ್ ಸೇನೆಯಿಂದ ಡಿ.ಎಂ.ಮಾದೇಗೌಡ, ಉತ್ತಮ ಪ್ರಜಾಕೀಯ ಪಾರ್ಟಿಯ ಎಂ.ಮಂಜುನಾಥ್, ಎಸ್ ಯುಸಿಐ (ಕಮ್ಯೂನಿಸ್ಟ್) ಟಿ.ಸಿ.ರಮಾ , ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಎ)ದ ಡಾ.ಎಂ.ವೆಂಕಟಸ್ವಾಮಿ, ಸರ್ವ ಜನತಾ ಪಾರ್ಟಿಯ ವೆಂಕಟೇಶಪ್ಪ, ಪಕ್ಷೇತರರಾಗಿ ಈಶ್ವರ, ಬಿ.ಗೋಪಾಲ್, ಎಚ್.ಟಿ.ಚಿಕ್ಕರಾಜು, ಎಂ.ಸಿ.ದೇವರಾಜು, ಜೆ.ಟಿ.ಪ್ರಕಾಶ್, ರಘುಜಾಣಗೆರೆ ಕಣದಲ್ಲಿದ್ದು, ಇವರೆಲ್ಲರ ರಾಜಕೀಯ ಭವಿಷ್ಯವನ್ನು ಮತದಾರರು ಬರೆದಿದ್ದಾರೆ.

ರಾಜಕೀಯ ಪಕ್ಷಗಳ ಶಕ್ತಿ ಸಾಬೀತು ಮತ್ತು ಅಭ್ಯರ್ಥಿಗಳ ಸ್ವಸಾಮರ್ಥ್ಯ ಸಾಬೀತು ಪಡಿಸಲು ಸಂಸತ್ ಚುನಾವಣೆ ಅಗ್ನಿ ಪರೀಕ್ಷೆಯಾಗಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೂ ಫಲಿತಾಂಶ ಪರಿಣಾಮ ಬೀರಲಿರುವ ಕಾರಣಕ್ಕೆ ಪ್ರಮುಖ ರಾಜಕೀಯ ಮುಖಂಡರು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದರು. ಅಭ್ಯರ್ಥಿಗಳ ಹಣೆ ಬರಹ ತಿಳಿಯಲು ಮೇ 23ರವರೆಗೆ ಕಾಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.