ರಾಮನಗರ: ಪಾಕಿಸ್ತಾನ ಮೂಲದ ಮಹಿಳೆಯೊಬ್ಬರು ರಾಮನಗರದಲ್ಲಿ 20 ವರ್ಷಗಳಿಂದ ನೆಲಸಿದ್ದಾರೆ. 52 ವರ್ಷದ ಮಹಿಳೆ ಸ್ಥಳೀಯ ವ್ಯಕ್ತಿಯೊಬ್ಬರನ್ನು ವಿವಾಹವಾಗಿ ಕುಟುಂಬದೊಂದಿಗೆ ಬದುಕುತ್ತಿದ್ದಾರೆ. ಮಹಿಳೆ ನೆಲೆಸಿರುವುದನ್ನು ಖಚಿತಪಡಿಸಿರುವ ಪೊಲೀಸರು, ಅವರ ಹಿನ್ನೆಲೆ ಸೇರಿದಂತೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನೆ ಘಟನೆ ಬಳಿಕ, ದೇಶದಲ್ಲಿ ಪಾಕ್ ಪ್ರಜೆಗಳ ಕುರಿತು ಸರ್ಕಾರ ಮಾಹಿತಿ ಕಲೆಹಾಕುತ್ತಿದೆ. ಅದರಂತೆ ಮಹಿಳೆಯೊಬ್ಬರು ರಾಮನಗರದಲ್ಲಿ ನೆಲಸಿರುವುದು ಗೊತ್ತಾಗಿದೆ. ಯಾವ ಕಾರಣಕ್ಕೆ ಭಾರತಕ್ಕೆ ಬಂದಿದ್ದರು? ದೇಶದ ಪೌರತ್ವ ಪಡೆದಿದ್ದಾರೆಯೇ? ವೀಸಾ ಹೊಂದಿದ್ದಾರೆಯೇ? ಅಥವಾ ಅನಧಿಕೃತವಾಗಿ ನೆಲಸಿದ್ದಾರೆಯೇ ಎಂಬುದರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸಗೌಡ, ‘ಜಿಲ್ಲೆಯಲ್ಲಿ ಪಾಕ್ ಮೂಲದ ಮಹಿಳೆ ನೆಲಸಿರುವುದು ನಿಜ. ಅವರ ಕುರಿತ ಮಾಹಿತಿ ಬಹಿರಂಗಪಡಿಸಲಾಗದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.