ADVERTISEMENT

ಜಾತಿ ವ್ಯವಸ್ಥೆಗೆ ಮದ್ದು ಅರೆದ ಮೇಧಾವಿ: ರಘುನಂದನ್ ರಾಮಣ್ಣ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 5:12 IST
Last Updated 15 ಏಪ್ರಿಲ್ 2024, 5:12 IST
ಚನ್ನಪಟ್ಟಣದಲ್ಲಿ ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮವನ್ನು ಬೆಂಗಳೂರು ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಅಧ್ಯಕ್ಷ ರಘುನಂದನ್ ರಾಮಣ್ಣ ಉದ್ಘಾಟಿಸಿದರು
ಚನ್ನಪಟ್ಟಣದಲ್ಲಿ ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮವನ್ನು ಬೆಂಗಳೂರು ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಅಧ್ಯಕ್ಷ ರಘುನಂದನ್ ರಾಮಣ್ಣ ಉದ್ಘಾಟಿಸಿದರು    

ಚನ್ನಪಟ್ಟಣ: ಸಮಾಜದಲ್ಲಿ ಬೇರೂರಿದ್ದ ಜಾತಿ ವ್ಯವಸ್ಥೆ ಹೋಗಲಾಡಿಸಿ ಸಂವಿಧಾನ ಮೂಲಕ ಪ್ರತಿಯೊಂದು ಸಮುದಾಯಕ್ಕೂ ನ್ಯಾಯ ಒದಗಿಸಿಕೊಟ್ಟವರು ಡಾ.ಬಿ.ಆರ್ ಅಂಬೇಡ್ಕರ್ ಎಂದು ಬೆಂಗಳೂರು ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಅಧ್ಯಕ್ಷ ರಘುನಂದನ್ ರಾಮಣ್ಣ ಅಭಿಪ್ರಾಯಪಟ್ಟರು.

ಅಂಬೇಡ್ಕರ್ ಸ್ಮಾರಕ ಚಾರಿಟಬಲ್ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಅವರ 133ನೇ ಜಯಂತಿಯಲ್ಲಿ ಮಾತನಾಡಿದರು. 

ಉನ್ನತ ವಿದ್ಯಾಭ್ಯಾಸ ಮಾಡಿ ಪ್ರಪಂಚವೇ ಬೆರಗಾಗುವಂತಹ ಸಂವಿಧಾನ ರಚನೆ ಮಾಡಿದವರು. ಪ್ರತಿಯೊಂದು ಸಮುದಾಯಕ್ಕೆ ತನ್ನದೇ ಚಿಂತನೆ ಮುಖಾಂತರ ನ್ಯಾಯ ಒದಗಿಸಿಕೊಟ್ಟ ಮಹನೀಯ ಎಂದರು.

ADVERTISEMENT

ವಕೀಲ ಕುಮಾರ್ ಮಾತನಾಡಿ, ಶೋಷಿತರ ಬಾಳಿನಲ್ಲಿ ನಂದಾದೀಪ ಹೊತ್ತಿಸಿದವರು ಅಂಬೇಡ್ಕರ್. ಸೌಲಭ್ಯ ವಂಚಿತರು ಉತ್ತಮ ಜೀವನ ಸಾಗಿಸಲು ಅಂಬೇಡ್ಕರ್ ಕಾರಣ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಕುಮಾರ್, ನಗರಸಭೆ ಸದಸ್ಯ ಸತೀಶ್ ಬಾಬು, ಟ್ರಸ್ಟ್ ಅಧ್ಯಕ್ಷೆ ಶಾಂತಮ್ಮ ವೆಂಕಟಾಚಲಯ್ಯ, ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ದಲಿತ ಮುಖಂಡರಾದ ವೆಂಕಟೇಶ್, ಅಕ್ಕೂರು ಶೇಖರ್, ರೇಣುಕಮ್ಮ, ಹೇಮಾ ಶಿವರಾಜು, ಇತರರು ಹಾಜರಿದ್ದರು. ಜಾನಪದ ಗೀತ ಗಾಯನ ಹಾಗೂ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.