ಮಾಗಡಿ: ಸ್ವಸ್ಥ ಪಶು- ಸಮೃದ್ಧ ರೈತ ಎಂಬ ಧ್ಯೇಯದೊಂದಿಗೆ ತಾಲ್ಲೂಕಿನ ಮಾಯಾನಯಕನಹಳ್ಳಿ ಗ್ರಾಮದಲ್ಲಿ ಜಾನುವಾರು ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
50ಕ್ಕೂ ಹೆಚ್ಚು ರಾಸುಗಳು, ಕುರಿ, ಮೇಕೆಗಳಿಗೆ ಲಸಿಕೆ ಮತ್ತು ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಲಾಯಿತು. ಜಾನುವಾರು ತಪಾಸಣೆ ಮಾಡಲಾಯಿತು.
ಐಸಿಎಆರ್ ತಾಲ್ಲೂಕು ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಷನ್ ಬೆಂಗಳೂರು, ಪಶು ಸಂಗೋಪನೆ ಹಾಗೂ ಪಶು ವೈದೈಕೀಯ ಸೇವಾ ಇಲಾಖೆ ಮತ್ತು ಬೆಂಗಳೂರು ಸಹಕಾರ ಹಾಲು ಒಕ್ಕೂಟ ವಲಯ ಸಹಯೋಗದಲ್ಲಿ ಈ ಶಿಬಿರ ನಡೆಯಿತು.
ಸಮತೋಲನ ಆಹಾರ ಹಾಗೂ ಉತ್ತಮ ಗುಣಮಟ್ಟದ ಹಸಿರು ಮೇವನ್ನು ಜಾನುವಾರುಗಳಿಗೆ ಒದಗಿಸಿದಲ್ಲಿ ಉತ್ತಮ ಗುಣಮಟ್ಟದ ಹಾಲು ಪಡೆಯಬಹುದು ಕೃಷಿ ವಿಜ್ಞಾನ ಕೇಂದ್ರದ ವಿಸ್ತರಣಾ ವಿಜ್ಞಾನಿ ಡಾ.ಎಸ್.ಸೌಜನ್ಯ ತಿಳಿಸಿದರು.
ಪಶು ಸಂಗೋಪನೆಯಲ್ಲಿ ಪಶುಗಳ ಆರೋಗ್ಯ ನಿರ್ವಹಣೆ, ಕೃತಕಗರ್ಭಧಾರಣೆ, ಪಶುಗಳ ಪಾಲನೆ ಪೋಷಣೆ, ಬರಡುರಾಸು, ಫಲವಂತಿಕೆ ಹಾಗೂ ಕೆಚ್ಚಲು ಬಾವು ಕುರಿತು ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಷನ್ ಶಿವರಾಮು, ಪಶು ಸಂಗೋಪನೆ ಹಾಗೂ ಪಶು ವೈದೈಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ನಾಗಭೂಷಣ, ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಜಯ್ ಕುಮಾರ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.