ADVERTISEMENT

ಮಾಗಡಿ : ಬಿಸಿಎಂ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 29 ಮೇ 2023, 14:25 IST
Last Updated 29 ಮೇ 2023, 14:25 IST
ಬಿಸಿಎಂ ಹಾಸ್ಟೆಲ್‌ (ಪ್ರಾತಿನಿಧಿಕ ಚಿತ್ರ)
ಬಿಸಿಎಂ ಹಾಸ್ಟೆಲ್‌ (ಪ್ರಾತಿನಿಧಿಕ ಚಿತ್ರ)   

ಮಾಗಡಿ: ತಾಲ್ಲೂಕಿನ ವಿವಿಧ ಶಾಲಾ–ಕಾಲೇಜುಗಳಲ್ಲಿ 5ರಿಂದ 10ನೇ ತರಗತಿಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಲ್ಲಿ 2023–24ನೇ ಸಾಲಿಗೆ ಪ್ರವೇಶಾವಕಾಶ ಕಲ್ಪಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸುನೀತಾ ತಿಳಿಸಿದ್ದಾರೆ.

ಪಟ್ಟಣದ ಸೋಮೇಶ್ವರ ಬಡಾವಣೆ, ತಗ್ಗಿಕುಪ್ಪೆ, ಮಾಡಬಾಳ್, ಅಜ್ಜನಹಳ್ಳಿ, ಎನ್‌ಇಎಸ್‌ ಸರ್ಕರ್ಲ್‌ಗಳಲ್ಲಿ ಇರುವ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ವಿದ್ಯಾರ್ಥಿ ನಿಲಯಗಳಿವೆ.

ಪ್ರವೇಶ ಬಯಸುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಡ್ಡಾಯವಾಗಿ ಎಸ್‌ಟಿಎಸ್‌ ಸಂಖ್ಯೆ ಮಾಡಿಸಿರಬೇಕು. ಇತ್ತೀಚಿನ 2 ಭಾವಚಿತ್ರ, ಆಧಾರ್‌ ಕಾರ್ಡ್‌ ಜೆರಾಕ್ಸ್‌, ಜಾತಿ ಮತ್ತು ಆಧಾರ್‌ ಪ್ರಮಾಣ ಪತ್ರ, ಉತ್ತೀರ್ಣ ಮೂಲ ಅಂಕಪಟ್ಟಿ, ರಾಷ್ಡ್ರೀಕೃತ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆದಿರಬೇಕು.

ADVERTISEMENT

ಬ್ಯಾಂಕ್‌ ಅಕೌಂಟ್‌ ನಂಬರ್‌, ಐಎಫ್‌ಎಸ್‌ಸಿ ಕೋಡ್‌ ಇರುವ ಪಾಸ್‌ಪುಸ್ತಕದ ನಕಲು ಪ್ರತಿ ಲಗತ್ತಿಸಿರಬೇಕು. ವಿದ್ಯಾರ್ಥಿ ನಿಲಯಗಳಲ್ಲಿ ಉಚಿತ ಊಟ, ಶುದ್ಧ ಕುಡಿಯುವ ನೀರು, ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳಿಗೆ ಉಚಿತಪಠ್ಯ ಪುಸ್ತಕ, ತರಬೇತಿ ಇತರ ಸವಲತ್ತು ನೀಡಲಾಗುವುದು.

ಸಂಪರ್ಕಕದ ವಿವರ

ತಾಲ್ಲೂಕು ಕಲ್ಯಾಣಾಧಿಕಾರಿ ಕಚೇರಿ, ಹಿಂದುಳಿದ ವರ್ಗಗಳ ಇಲಾಖೆ ಸರ್ಕಾರಿ ಕಚೇರಿಗಳ ಸಂಕೀರ್ಣ, ಬೈಚಾಪುರ ರಸ್ತೆ, ಮಾಗಡಿ ಪಟ್ಟಣ. ಮೊಬೈಲ್‌: 6362749408,9686743832.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.