ಚನ್ನಪಟ್ಟಣದಲ್ಲಿ ನಡೆದ ಕಲೆ, ಸಾಹಿತ್ಯ, ಸಂಸ್ಕೃತಿ ಉತ್ಸವ ಕಾರ್ಯಕ್ರಮವನ್ನು ಎಂಜಿನಿಯರ್ ಎನ್. ಪೂರ್ಣಿಮಾ ಉದ್ಘಾಟಿಸಿದರು. ಎ.ಎಸ್. ಪ್ರೇಮ ಹಾಗೂ ಇತರರು ಇದ್ದರು.
ಚನ್ನಪಟ್ಟಣ: ನಗರದಲ್ಲಿ ಮಂಗಳವಾರ ನಡೆದ ಕಲೆ, ಸಾಹಿತ್ಯ, ಸಂಸ್ಕೃತಿ ಉತ್ಸವದಲ್ಲಿ ಚೌಡಮ್ಮ, ಜವರಮ್ಮ ಹಾಗೂ ಮಾಯಮ್ಮ ಮತ್ತು ತಂಡದವರು ಸೋಬಾನೆ ಗೀತೆಗಳನ್ನು ಹಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸಿರಿ ಸಾಮಾಜಿಕ ಮತ್ತು ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ನಡೆದ ಉತ್ಸವದಲ್ಲಿ ವಿವಿಧ ಕಲಾವಿದರ ರಂಗಗೀತೆ, ಕ್ರಾಂತಿಗೀತೆ, ಹಾಸ್ಯ, ಮಿಮಿಕ್ರಿ ಪ್ರೇಕ್ಷಕರಿಗೆ ಮುದ ನೀಡಿದವು.
ಗ್ರಾಮೀಣ ಭಾಗದ ಜನರು ಕೆಲಸದ ಶ್ರಮ ಮರೆಯಲು ಕಟ್ಟಿದ ಜಾನಪದ ಸಂಸ್ಕೃತಿ ಅನನ್ಯವಾಗಿದೆ. ಶ್ರಮ ಸಂಸ್ಕೃತಿಯ ಜೊತೆ ಜಾನಪದ ಸಂಸ್ಕೃತಿ ಕಟ್ಟಿ ಬೆಳೆಸಿದ್ದಾರೆ.ಈ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಅವಶ್ಯ ಎಂದು ಸರ್ವಸ್ವ ಗ್ರಾಮೀಣ ಸಂಸ್ಥೆಯ ಕಾರ್ಯದರ್ಶಿ ಎ.ಎಸ್. ಪ್ರೇಮ ಹೇಳಿದರು.
ಮಹಿಳೆಯರು ಇಂದು ಎಲ್ಲ ರಂಗಗಳಲ್ಲೂ ಮೇಲುಗೈ ಸಾಧಿಸುತ್ತಿದ್ದು, ಇದು ಮಹಿಳಾ ಸಬಲೀಕರಣಕ್ಕೆ ಬರೆಯುತ್ತಿರುವ ಮುನ್ನುಡಿ ಎಂದು ಉತ್ಸವ ಉದ್ಘಾ ಸಿವಿಲ್ ಎಂಜಿನಿಯರ್ ಎನ್. ಪೂರ್ಣಿಮಾ ಅಭಿಪ್ರಾಯಪಟ್ಟರು.
ಸೋಬಾನೆ ಕಲಾವಿದರಾದ ಚಂದ್ರಮ್ಮ, ಮಾಯಮ್ಮ, ಚಿಕ್ಕತಾಯಮ್ಮ, ಗಾಯಕ ಬ್ಯಾಡರಹಳ್ಳಿ ಶಿವಕುಮಾರ್, ಕಲಾವಿದ ಧರ್ಮ ಹಾಸನ್ ಮುಂತಾದ ಕಲಾವಿದರು ಭಾಗವಹಿಸಿದ್ದರು.
ತಿಟ್ಟಮಾರನಹಳ್ಳಿ ಸಿದ್ದೇಗೌಡ, ಎಸ್. ಕುಮಾರ್, ಕೃಷ್ಣ, ಎಸ್.ಆರ್. ಮನುಜ, ಎಸ್. ಪೂರ್ಣಿಮಾ, ಭರತ್ ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.