ADVERTISEMENT

ಮಾಗಡಿ: ಸರ್ಕಾರಿ ಶಾಲೆ ಮಕ್ಕಳಿಗೆ ಬೆಡ್‌ಶೀಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 13:46 IST
Last Updated 25 ಜನವರಿ 2020, 13:46 IST
ಮಾಗಡಿ ಸೋಮೇಶ್ವರ ಬಡಾವಣೆಯ ಸರ್ಕಾರಿ ಶಾಲೆ ಮಕ್ಕಳಿಗೆ ಯಶಶ್ವಿನಿ.ಬಿ.ಪಟೇಲ್‌ ಸವಿನೆನಪಿನಲ್ಲಿ ಪುರುಷೋತ್ತಮ್‌ ಪಟೇಲ್‌ ಸಹೋದರರು ಬೆಡ್‌ಶೀಟ್‌ ವಿತರಿಸಿದರು
ಮಾಗಡಿ ಸೋಮೇಶ್ವರ ಬಡಾವಣೆಯ ಸರ್ಕಾರಿ ಶಾಲೆ ಮಕ್ಕಳಿಗೆ ಯಶಶ್ವಿನಿ.ಬಿ.ಪಟೇಲ್‌ ಸವಿನೆನಪಿನಲ್ಲಿ ಪುರುಷೋತ್ತಮ್‌ ಪಟೇಲ್‌ ಸಹೋದರರು ಬೆಡ್‌ಶೀಟ್‌ ವಿತರಿಸಿದರು   

ಮಾಗಡಿ: ಯಶಶ್ವಿನಿ.ಬಿ.ಪಟೇಲ್‌ ಸ್ಮರಣಾರ್ಥವಾಗಿ ಶನಿವಾರ ಸೋಮೇಶ್ವರ ಬಡಾವಣೆಯ ಸರ್ಕಾರಿ ಹಿರಿಯ ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಪುರುಷೋತ್ತಮ್‌ ಪಟೇಲ್‌ ಉಚಿತವಾಗಿ ಬೆಡ್‌ಶೀಟ್‌ಗಳನ್ನು ವಿತರಿಸಿದರು.

ಎಲ್ಲ ಮಕ್ಕಳಿಗೂ ಸಿಹಿಯೂಟ ಹಾಕಿಸಲಾಯಿತು. ರಮೇಶ್‌ ಪಟೇಲ್‌, ಗೋವಿಂದ ಪಟೇಲ್‌, ಜೀತೇಂದ್ರ ಪಟೇಲ್‌, ಸೋಮೇಶ್ವರ ಬಡಾವಣೆಯ ಮುಖಂಡ ನಾಗರಾಜು ಇದ್ದರು. ಬೆನ್ನುಹುರಿ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಗವಿಕಲರಿಗೆ ಅರ್ಜುನ್‌ ಪಟೇಲ್‌ ಮತ್ತು ನಾನಾಲಾಲ್‌ ಪಟೇಲ್‌ ಬೆಡ್‌ ಶೀಟ್‌ಗಳನ್ನು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT