ಚನ್ನಪಟ್ಟಣ: ಶ್ರೀಲಂಕಾದ ಕೊಲಂಬೊ ನಗರದಲ್ಲಿ ನಗರದ ಕಲ್ಪಶ್ರೀ ಫರ್‌ಫಾರ್ಮಿಂಗ್ ಆರ್ಟ್ಸ್ ಸೆಂಟರ್, ಚನ್ನಪಟ್ಟಣ ಹಾಗೂ ಕೇಂದ್ರ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈಚೆಗೆ ನಡೆದ ವಿಶ್ವ ನೃತ್ಯ ಹಬ್ಬ 2025 ಕಾರ್ಯಕ್ರಮದಲ್ಲಿ ನಗರದ ಕಲ್ಪಶ್ರೀ ಫರ್‌ಫಾರ್ಮಿಂಗ್ ಆರ್ಟ್ಸ್ ಸೆಂಟರ್‌ನ ನೃತ್ಯಪಟುಗಳು ನಡೆಸಿಕೊಟ್ಟ ಭರತನಾಟ್ಯ ಮೆಚ್ಚುಗೆಗೆ ಪಾತ್ರವಾಯಿತು.
ಕೊಲೊಂಬೊ ನಗರದ ವೈಎಸ್‌ಎ ಸಭಾಂಗಣದಲ್ಲಿ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಕಲ್ಪಶ್ರೀ ಸಂಸ್ಥೆಯ ಎಂಟು ವಿದ್ಯಾರ್ಥಿಗಳು, ಬೆಂಗಳೂರು ನೃತ್ಯ ಶಿಕ್ಷಕಿ ಗುಣವತಿ ಅವರ ಎಂಟು ವಿದ್ಯಾರ್ಥಿಗಳು ಹಾಗೂ ಹೊಸಕೋಟೆ ನೃತ್ಯಶಿಕ್ಷಕಿ ಮಧುಶ್ರೀ ಅವರ 9 ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶನ ನೀಡಿದರು.
ಶ್ರೀಲಂಕಾದ ಹಿರಿಯ ನೃತ್ಯ ಗುರು ಸುಭಾಷಿಣಿ ಪದ್ಮನಾಭನ್, ಬೆಂಗಳೂರು ಹಿರಿಯ ನೃತ್ಯಗುರು ಗುಣವತಿ ಹಾಗೂ ಶ್ರೀಲಂಕಾದ ನೃತ್ಯ ಗುರು ವಿನ್ನಿಫ್ರೆಡ್ ಅಮಲಾತಶನ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಚನ್ನಪಟ್ಟಣದ ಹಿರಿಯ ಸಂಗೀತ ಶಿಕ್ಷಕಿ ನಾಗಶ್ರೀ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.