
ಮಾಗಡಿ: 2007ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬಿಡದಿ ಟೌನ್‌ಶಿಪ್‌ಗೆ ಚಾಲನೆ ನೀಡಲಾಯಿತು. ಈಗ ಆ ಯೋಜನೆಯನ್ನು ಮುಂದುವರಿಸಲಾಗಿದೆ. ಟೌನ್‌ಶಿಪ್‌ಗಾಗಿ ಜಮೀನು ಕಳೆದುಕೊಳ್ಳುವ ರೈತರಿಗೆ ಶೇ50ರಷ್ಟು ಪರಿಹಾರ ನೀಡಲಾಗುವುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ಅಜ್ಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹5ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ರೈತರಿಂದ ಅರ್ಜಿ ಸ್ವೀಕರಿಸುವಾಗ ಕೆಲವರು ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ಆದರೆ, ಅದನ್ನೇ ದೊಡ್ಡದಾಗಿ ಬಿಂಬಿಸಲಾಗಿದೆ. ಗಲಭೆ ಏನೂ ಆಗಿಲ್ಲ. ಸುಮ್ಮನೆ ಅಪಪ್ರಚಾರ ಮಾಡಲಾಗಿದೆ. ಯಾವುದೇ ಯೋಜನೆಗೆ ಸ್ವಲ್ಪಮಟ್ಟಿನ ವಿರೋಧ ಇರುತ್ತದೆ. ವಿರೋಧ ವ್ಯಕ್ತಪಡಿಸುವ ರೈತರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದರು.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೇ ಕಂಚನಹಳ್ಳಿ ಮತ್ತು ಬೈರಮಂಗಲದಲ್ಲಿ ಈ ಯೋಜನೆ ಒಳ್ಳೆಯದು ಎಂದು ಅವರೇ ಹೇಳಿದ್ದರು. ಅವರು ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಈ ಯೋಜನೆಯನ್ನು ಕೈಬಿಡಬಹುದಿತ್ತು. ಆದರೆ, ಅದನ್ನು ಬಿಡಲಿಲ್ಲ. ಆಗ ಅವರೇ ಶೇ40 ಪರಿಹಾರ ನೀಡುವುದಾಗಿ ಹೇಳಿದ್ದರು. ಈಗ ನಾವು ಶೇ50 ಪರಿಹಾರ ನೀಡುತ್ತಿದ್ದೇವೆ. ಶೇ45 ಕಮರ್ಷಿಯಲ್ ಬಳಕೆಗೆ ಅವಕಾಶವಿದೆ. ಇದರ ಜೊತೆಗೆ ಒಂದು ಎಕರೆಗೆ ₹2ಕೋಟಿ ಪರಿಹಾರ ನೀಡಲು ಒತ್ತಡ ಹಾಕುತ್ತಿದ್ದೇವೆ. ₹2ರಿಂದ 3ಕೋಟಿ ಪರಿಹಾರ ಸಿಗುವ ಸಾಧ್ಯತೆ ಇದೆ. ಅಂತಿಮ ಅಧಿಸೂಚನೆ ಬರಲಿದೆ ಮತ್ತು ಯೋಜನೆ ನಡೆಯಲಿದೆ ಎಂದು ಬಾಲಕೃಷ್ಣ ವಿವರಿಸಿದರು.
ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣಕ್ಕೆ ಮರಳುವ ಬಗ್ಗೆ ಪ್ರತಿಕ್ರಿಯಿಸಿ, ಅವರು ಒಮ್ಮೆ ಇಲ್ಲಿ. ಒಮ್ಮೆ ಲೋಕಸಭೆಗೆ ಹೋಗುವ ರೀತಿ ಇದೆ. ಅವರನ್ನು ಪ್ರಶ್ನಿಸುವವರಿಲ್ಲ. ಅವರು ಮಂಡ್ಯದಲ್ಲಿ ಗೆದ್ದರು. ಚನ್ನಪಟ್ಟಣದಲ್ಲಿ ಸ್ಪರ್ಧಿಸಿದರು. ಈಗ ರಾಮನಗರಕ್ಕೆ ಬರುವುದಾಗಿ ಹೇಳುತ್ತಿದ್ದಾರೆ. ಕರ್ಮಭೂಮಿ ಎಲ್ಲಿದೆ? ಆಕಾಶ ನೋಡಲು ನೂಕುನುಗ್ಗಲು. ಯಾರು ಬೇಕಾದರೂ ರಾಜಕಾರಣಕ್ಕೆ ಬರಬಹುದು. ಇದು ಪ್ರಜಾಪ್ರಭುತ್ವ ಅಭಿಪ್ರಾಯಪಟ್ಟರು.
ಕುಮಾರಸ್ವಾಮಿ ರಾಮನಗರ ಶಾಸಕರಾಗಿದ್ದಾಗ ಮತ್ತು ಪ್ರಸ್ತುತ ಶಾಸಕ ಇಕ್ಬಾಲ್ ಹುಸೇನ್ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಆಯಿತು ಎಂಬುದನ್ನು ಜನ ನೋಡುತ್ತಿದ್ದಾರೆ. ಕುಮಾರಸ್ವಾಮಿ ಅಭಿವೃದ್ಧಿ ಮಾಡಿದ್ದರೆ ಈಗಿನ ಶಾಸಕರಿಗೆ ಏನೂ ಮಾಡಲು ಉಳಿಯುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು. ಈಗ ಮತ್ತೆ ರಾಮನಗರಕ್ಕೆ ಬರುತ್ತಾರೆಂದರೆ ಜನರ ಬಗ್ಗೆ ಅವರು ಏನು ಭಾವಿಸುತ್ತಾರೋ ಗೊತ್ತಿಲ್ಲ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರ ಹೋರಾಟಕ್ಕೆ ಪ್ರತಿಫಲ ಸಿಗಬೇಕು. ಅವರಿಗೆ ಸಿಎಂ ಸ್ಥಾನ ಸಿಕ್ಕರೆ ಜನರ ಸಮಸ್ಯೆ ಪ್ರಾಮಾಣಿಕವಾಗಿ ಬಗೆಹರಿಸಬಹುದು. ಮೊದಲು ಅವರಿಗೆ ಸ್ಥಾನ ಸಿಗಲಿ, ನಂತರ ನನ್ನ ಸಚಿವ ಸ್ಥಾನದ ಬಗ್ಗೆ ಮಾತಾಡುತ್ತೇನೆ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೈಪಾಲ್, ಎಡಿಎಲ್ಆರ್ ಆನಂದ್, ಬ್ಲಾಕ್ ಶಿಕ್ಷಣಾಧಿಕಾರಿ ಚಂದ್ರಶೇಖರ್, ದಿಶಾ ಸಮಿತಿ ಮಾಜಿ ಸದಸ್ಯ ಜೆ.ಪಿ.ಚಂದ್ರೇಗೌಡ, ಬಿ.ಟಿ.ವೆಂಕಟೇಶ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
2007ರಲ್ಲಿ ಎಚ್.ಡಿ. ಕುಮಾರಸ್ವಾಮಿ ರವರು ಮುಖ್ಯಮಂತ್ರಿಗಳಾಗಿದ್ದಾಗ ಬಿಡದಿ ಟೌನ್ ಶಿಪ್ ಗೆ ಚಾಲನೆ ನೀಡಿದ್ದು ಅವರೇ ಈಗ ಆ ಯೋಜನೆಯನ್ನು ಮುಂದುವರಿಸಿದ್ದು ಟೌನ್ ಶಿಪ್ ನಲ್ಲಿ ಜಮೀನು ಕಳೆದುಕೊಳ್ಳುವ ರೈತರಿಗೆ ಶೇ. 50ರಷ್ಟು ಪರಿಹಾರ ಕೊಡಲಾಗುತ್ತಿದೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ತಾಲ್ಲೂಕಿನ ಅಜ್ಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಐದು ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆಯಾಗಿ ಉದ್ಘಾಟನೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್ ಶಿಪ್ ವಿಚಾರವಾಗಿ ರೈತರಿಂದ ಅರ್ಜಿ ಸ್ವೀಕರಿಸುವಾಗ ಕೆಲವರು ಯೋಜನೆ ಬೇಡ ಎಂದು ವಿರೋಧ ಮಾಡಿದರು ಅದನ್ನೇ ದೊಡ್ಡದಾಗಿ ಬಿಂಬಿಸಲಾಗಿದೆ ಗಲಾಟೆಯಾಗಿಲ್ಲ ಸುಮ್ಮನೆ ಅಪಪ್ರಚಾರ ಮಾಡಲಾಗಿದೆ ಒಂದು ಯೋಜನೆ ಯಾಗಬೇಕಾದರೆ ಪರ ವಿರೋಧ ಎರಡು ಇರುತ್ತದೆ ವಿರೋಧ ಮಾಡುತ್ತಿರುವ ರೈತರ ಜೊತೆಯೂ ಮಾತನಾಡುತ್ತಿದ್ದು ಎಚ್.ಡಿ. ಕುಮಾರಸ್ವಾಮಿ ರವರು ಮುಖ್ಯಮಂತ್ರಿಗಳೇ ಆಗಿದ್ದಾಗ ಇದು ಒಳ್ಳೆಯ ಯೋಜನೆ ಎಂದು ಕಂಚಗಾರನಹಳ್ಳಿ, ಬೈರಮಂಗಲದಲ್ಲಿ ಕುಮಾರಸ್ವಾಮಿ ರವರೇ ಹೇಳಿಕೆ ಕೊಟ್ಟಿದ್ದರು ಎರಡನೇ ಬಾರಿ ಮುಖ್ಯಮಂತ್ರಿಯಾದಗ ಈ ಯೋಜನೆ ಕೈಬಿಡಬಹುದಾಗಿತ್ತು ಯಾಕೆ ಬಿಡಲಿಲ್ಲ ಗೊತ್ತಿಲ್ಲ, ಆಗ ಅವರು ಶೇ.40 ರಷ್ಟು ಪರಿಹಾರ ಕೊಡುತ್ತೇವೆ ಎಂದು ಹೇಳಿದರು ಈಗ ನಾವು ಶೇ. 50ರಷ್ಟು ಪರಿಹಾರ ಕೊಡಲಾಗುತ್ತಿದೆ ಶೇ. 45ರಷ್ಟು ಕಮರ್ಷಿಯಲ್ ಆಗಿ ಬಳಸಿಕೊಳ್ಳಲು ಅವಕಾಶ ಕೊಡಲಾಗುತ್ತದೆ ಇದರ ಜತೆ ಒಂದು ಎಕರೆಗೆ ಎರಡು ಕೋಟಿ ಮೇಲೆ ಪರಿಹಾರ ಕೂಡ ಕೊಡಿಸಲಾಗುತ್ತಿದ್ದು ಅಧಿಕಾರಿಗಳ ಜೊತೆ ಎರಡು ಕೋಟಿ ಪರಿಹಾರ ಬೇಕು ಎಂದು ಒತ್ತಡ ಹಾಕುತ್ತಿದ್ದೇವೆ ಎರಡರಿಂದ ಎರಡು ಮುಕ್ಕಾಲು ಕೋಟಿ ಪರಿಹಾರ ಕೊಡಲಾಗುತ್ತದೆ ಇಂದಿನ ಬಿಜೆಪಿ ಸರ್ಕಾರದಲ್ಲಿ ಬಿಡದಿ ಟೌನ್ ಶಿಫ್ ಅಕ್ಕಪಕ್ಕ ಜಮೀನಿಗೆ ಒಂದು ಕೋಟಿ 80 ಲಕ್ಷಕ್ಕೆ ಸರ್ಕಾರವೇ ವಶ ಪಡಿಸಿಕೊಂಡು ಕೆಎಡಿಬಿ ಯಿಂದ ಈಗ ನಾವು ಎರಡು ಪಟ್ಟು ಪರಿಹಾರ ಕೊಡುತ್ತಿದ್ದೇವೆ ಅಲ್ಲೂ ಸಮಸ್ಯೆ ಇದ್ದು ಕೆಲವರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅವರನ್ನು ಮನವರಿಸುವ ಕೆಲಸ ಮಾಡುತ್ತೇವೆ ಅಂತಿಮ ಅಧಿಸೂಚನೆ ಬರುತ್ತಿದ್ದು ಯೋಜನೆ ಯಾಗಲಿದೆ ಎಂದು ಬಾಲಕೃಷ್ಣ ವಿವರಿಸಿದರು.
ವಿರೋಧಪಕ್ಷದ ನಾಯಕರಾಗಿ ರಾಜ್ಯ ರಾಜಕಾರಣದಲ್ಲಿ ಕುಮಾರಸ್ವಾಮಿ ಇರಬಹುದು : ಮತ್ತೆ ರಾಜ್ಯ ರಾಜಕಾರಣಕ್ಕೆ ಎಚ್ ಡಿ ಕುಮಾರಸ್ವಾಮಿ ರವರು ಬರ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಬಾಲಕೃಷ್ಣ ಉತ್ತರಿಸಿ ವಿಶೇಷವಾಗಿ ಎಚ್ ಡಿ ಕುಮಾರಸ್ವಾಮಿ ರವರನ್ನೇ ರಾಜ್ಯ ರಾಜಕಾರಣಕ್ಕೆ ಬರುತ್ತಾರೆ ಎಂದು ಹೇಳುತ್ತಿದ್ದೀರಾ ಬೇರೆಯವರು ಬರಬಹುದು ಅವರು ಇಲ್ಲೇ ಇದ್ದರು ಮನಸೋ ಇಚ್ಛೆ ಅವರು ಒಂದು ಬಾರಿ ಇಲ್ಲೇ ಇರುತ್ತಾರೆ ಇನ್ನೊಂದು ಬಾರಿ ಲೋಕಸಭೆಗೆ ಹೋಗುತ್ತಾರೆ ಅವರನ್ನು ಯಾರು ಪ್ರಶ್ನೆ ಮಾಡುವಂತೆ ಇಲ್ಲ ಮಂಡ್ಯದಲ್ಲಿ ಗೆದ್ದಿದ್ದಾರೆ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿದ್ದಾರೆ ಈಗ ರಾಮನಗರದಲ್ಲಿ ಸ್ಪರ್ಧೆ ಮಾಡುತ್ತೆ ಎಂದು ಹೇಳುತ್ತಿದ್ದಾರೆ ಕರ್ಮಭೂಮಿ ಎಲ್ಲಿದೆ ಆಕಾಶ ನೋಡಲು ನೂಕು ನುಗ್ಗಲು ಯಾರು ಬೇಕಾದರೂ ರಾಜ್ಯ ರಾಜಕಾರಣಕ್ಕೆ ಬರಲಿ ಚುನಾವಣೆ ಇದು ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು ಇದು ಪ್ರಜಾಪ್ರಭುತ್ವವಾಗಿದೆ ಎಚ್.ಡಿ. ಕುಮಾರಸ್ವಾಮಿ ರವರು ರಾಮನಗರದಲ್ಲಿ ಶಾಸಕರಾಗಿದ್ದಾಗ ಎಷ್ಟು ಅಭಿವೃದ್ಧಿಯಾಗಿದೆ ಈಗಿನ ಶಾಸಕರಾದ ಇಕ್ಬಾಲ್ ಹುಸೇನ್ ರವರು ಶಾಸಕರಾದ ಮೇಲೆ ಎಷ್ಟು ಅಭಿವೃದ್ಧಿಯಾಗಿದೆ ಎಂಬುದು ಜನತೆ ನೋಡುತ್ತಿದ್ದಾರೆ ಕುಮಾರಸ್ವಾಮಿ ರವರೇ ಅಭಿವೃದ್ಧಿ ಮಾಡಿದ್ದರೆ ಈಗಿನ ಶಾಸಕರು ಯಾವ ಅಭಿವೃದ್ಧಿನು ಮಾಡುವಂತಿರಲಿಲ್ಲ ಮಾಗಡಿ ಕ್ಷೇತ್ರಕ್ಕೆ ರಾಹುಲ್ ಗಾಂಧಿ ಬಂದು ಸ್ಪರ್ಧೆ ಮಾಡಿದರೆ ನಾನು ಬಿಟ್ಟುಕೊಡುತ್ತೇನಾ ನಿನ್ನ ಕರ್ಮ ಭೂಮಿ ಮಾಗಡಿಯಲ್ಲಿ ಆಗಿದ್ದು ನಾನ್ ಇಲ್ಲೇ ಸ್ಪರ್ಧೆ ಮಾಡುತ್ತೇನೆ ಕುಮಾರಸ್ವಾಮಿ ರವರನ್ನು ಮಂಡ್ಯಕ್ಕೆ ಮತ್ತು ಚನ್ನಪಟ್ಟಣಕ್ಕೆ ಏಕೆ ಹೋಗಬೇಕಿತ್ತು ಈಗ ಮತ್ತೆ ರಾಮನಗರಕ್ಕೆ ಬರುತ್ತಾರೆ ಎಂದು ಹೇಳುತ್ತಿದ್ದಾರೆ ಜನಗಳನ್ನು ಕುಮಾರಸ್ವಾಮಿ ಏನೆಂದುಕೊಂಡಿದ್ದಾರೋ ಗೊತ್ತಿಲ್ಲ ಎಂದು ಬಾಲಕೃಷ್ಣ ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಿದರು.
ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಸಿಗಬೇಕು : ಡಿಸಿಎಂ ಡಿ.ಕೆ. ಶಿವಕುಮಾರ್ ರವರಿಗೆ ಸಿಎಂ ಸ್ಥಾನ ಲಭಿಸಬೇಕು ಹೋರಾಟಕ್ಕೆ ಪ್ರತಿಫಲ ಸಿಗಬೇಕಾಗಿದ್ದು ಕಾಂಗ್ರೆಸ್ ಕಟ್ಟಿ, ಕಾಂಗ್ರೆಸ್ ನಲ್ಲಿ ಬಂದವರು ಅವರಿಗೆ ಸಿಎಂ ಸ್ಥಾನ ಸಿಗಬೇಕು ನಾವೆಲ್ಲ ಬೇರೆ ಬೇರೆ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದು ಅವರಿಗೆ ಸಿಎಂ ಸ್ಥಾನ ಸಿಕ್ಕರೆ ಈ ಜನಗಳ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಬಗೆಹರಿಸಬಹುದು ಮೊದಲು ಅವರಿಗೆ ಸಿಎಂ ಸ್ಥಾನ ಸಿಗಲಿ ನಂತರ ನನ್ನ ಸಚಿವ ಸ್ಥಾನದ ಬಗ್ಗೆ ಮಾತನಾಡುತ್ತೇನೆ ಆತ್ಮವಿಶ್ವಾಸವಿದೆ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಸಿಗುತ್ತದೆ ಎಂದು ಶಾಸಕ ಬಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.
ಅಜ್ಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರೆವೇರಿಸಲಾಯಿತು.
ಇದೇ ವೇಳೆ ತಾ.ಪಂ.ಇಒ ಜೈಪಾಲ್, ಎಡಿಎಲ್ಆರ್ ಆನಂದ್, ಬಿಇಒ ಚಂದ್ರಶೇಖರ, ದಿಶ ಸಮಿತಿ ಮಾಜಿ ಸದಸ್ಯ ಜೆ.ಪಿ.ಚಂದ್ರೇಗೌಡ, ಬಿ.ಟಿ. ವೆಂಕಟೇಶ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.