ADVERTISEMENT

ಚಂದ್ರಶೇಖರ್‌ ಕುಟುಂಬದ ಆಸ್ತಿ ₹10 ಕೋಟಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 15:02 IST
Last Updated 15 ಅಕ್ಟೋಬರ್ 2018, 15:02 IST

ರಾಮನಗರ: ಬಿಜೆಪಿ ಅಭ್ಯರ್ಥಿಯಾಗಿರುವ ಎಲ್‌. ಚಂದ್ರಶೇಖರ್ ಕುಟುಂಬದ ಒಟ್ಟು ಆಸ್ತಿ ಮೌಲ್ಯ 10.20 ಕೋಟಿ.

ಸೋಮವಾರ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರು ತಮ್ಮ ಆಸ್ತಿಯ ವಿವರಗಳನ್ನು ನೀಡಿದರು. ಬಿಡದಿಯ ಸುತ್ತ ಮುತ್ತ ಒಟ್ಟು 13.34 ಎಕರೆ ಕೃಷಿ ಭೂಮಿಯನ್ನು ಅವರು ಹೊಂದಿದ್ದು, ಇದರ ಮಾರುಕಟ್ಟೆ ಮೌಲ್ಯ ₹ 6.8 ಕೋಟಿ ಇರುವುದಾಗಿ ನಮೂದಿಸಿದ್ದಾರೆ. ಅವರ ಪತ್ನಿ ಸುಮಿತ್ರಾ ಹೆಸರಿನಲ್ಲಿ ಬೆಂಗಳೂರಿನಲ್ಲಿ ಎರಡು ನಿವೇಶನ ಹಾಗೂ ಇಂಡಸ್ಟ್ರಿಯಲ್‌ ಶೆಡ್ ಸೇರಿ ಒಟ್ಟು ₹ 3 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.

₹ 2 ಲಕ್ಷ ನಗದು, ₹ 10 ಲಕ್ಷ ಮೌಲ್ಯದ ಕಾರ್ ಸೇರಿದಂತೆ ಒಟ್ಟು ₹ 13.6 ಲಕ್ಷ ಮೌಲ್ಯದ ಚರಾಸ್ತಿಯನ್ನು ಚಂದ್ರಶೇಖರ್ ಹೊಂದಿದ್ದು, ₹ 65 ಲಕ್ಷ ಸಾಲವೂ ಇದೆ. ಅವರ ಪತ್ನಿ ಬಳಿ ₹ 20 ಲಕ್ಷ ಮೌಲ್ಯದ 700 ಗ್ರಾಂ ಚಿನ್ನಾಭರಣ, ₹ 70 ಸಾವಿರ ಮೌಲ್ಯದ ಬೆಳ್ಳಿ ಹಾಗೂ ₹ 3 ಲಕ್ಷ ನಗದು ಇದೆ. ಮಗ ಮನೀಷ್ ಹೆಸರಲ್ಲಿ ₹ ಮೌಲ್ಯದ ಕೆಟಿಎಂ ಬೈಕ್ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.