ಮಾಗಡಿ: ತಾಲ್ಲೂಕು ಜನತೆಯ ಹಲವು ವರ್ಷಗಳ ಬೇಡಿಕೆಯಾಗಿದ್ದ ಮಾಗಡಿ-ಕೆಂಗೇರಿ ಮಾರ್ಗವಾಗಿ ಬಿಎಂಟಿಸಿ ಬಸ್ ಸಂಚಾರ ಸೋಮವಾರದಿಂದ ಆರಂಭವಾಗಿದ್ದು, ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಉದ್ಯೋಗ ಹಾಗೂ ವಿದ್ಯಾಭ್ಯಾಸಕ್ಕಾಗಿ ಅನೇಕ ಮಂದಿ ಮಾಗಡಿಯಿಂದ ಕೆಂಗೇರಿಗೆ ಬರುತ್ತಿದ್ದು. ಮಾಗಡಿ–ಕೆಂಗೇರಿಗೆ ಹೋಗಬೇಕಾದರೆ ಮಾಗಡಿ– ತಾವರೆಕೆರೆ, ತಾವರೆಕೆರೆಯಿಂದ ಕೆಂಗೇರಿಗೆ ಹೋಗಬೇಕಿತ್ತು. ಆದ್ದರಿಂದ ಮಾಗಡಿ–ಕೆಂಗೇರಿ ಮಾರ್ಗವಾಗಿ ಬಸ್ ಬಿಡುವಂತೆ ಅನೇಕ ಬಾರಿ ಪ್ರಯಾಣಿಕರು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಿರಲಿಲ್ಲ. ಹಾಗಾಗಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೂ ಮನವಿ ಸಲ್ಲಿಸಿದ್ದರು. ಅವರು ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ, ಮಾಗಡಿ–ಕೆಂಗೇರಿ ಮಾರ್ಗವಾಗಿ ಬಸ್ ಸಂಚರಿಸಲು ಕ್ರಮ ಕೈಗೊಂಡಿದ್ದಾರೆ.
ಕೆಂಗೇರಿಯಿಂದ ಬೆಳಿಗ್ಗೆ 6 ರಿಂದ ರಾತ್ರಿ 8.15 ರವರೆಗೆ. ಮಾಗಡಿಯಿಂದ ಬೆಳಿಗ್ಗೆ 6 ರಿಂದ ರಾತ್ರಿ 8.15 ರವರೆಗೆ ಎಂಟು ಬಸ್‌ಗಳು ಸಂಚರಿಸಲಿವೆ.
ಮುಂದಿನ ದಿನಗಳಲ್ಲಿ ಬಸ್ ಸಂಖ್ಯೆ ಹೆಚ್ಚಳ
ಮಾಗಡಿ-ಕೆಂಗೇರಿ ಮಾರ್ಗವಾಗಿ ಬಸ್ ಸಂಚರಿಸುವಂತೆ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತಾಲ್ಲೂಕಿನ ಜನತೆಗೆ ಅನುಕೂಲವಾಗುವಂತೆ ಬಸ್ ಸಂಚಾರ ಪ್ರಾರಂಭವಾಗಿದೆ. ಪ್ರತಿನಿತ್ಯ ಎಂಟು ಬಸ್‌ಗಳು ಸಂಚರಿಸುತ್ತವೆ. ಬೆಳಿಗ್ಗೆ 6 ರಿಂದ ಮಾಗಡಿ ಮತ್ತು ಕೆಂಗೇರಿ ಎರಡೂ ಕಡೆಯಲ್ಲಿ ಸಂಚಾರ ಪ್ರಾರಂಭಿಸಿ, ರಾತ್ರಿ 8.15ಕ್ಕೆ ಕೊನೆಗೊಳ್ಳುತ್ತವೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಪ್ರಮಾಣ ಆಧರಿಸಿ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು.
- ಎಚ್.ಸಿ.ಬಾಲಕೃಷ್ಣ, ಶಾಸಕರು, ಮಾಗಡಿ
ಸೋಮವಾರದಿಂದ ಮಾಗಡಿ– ಕೆಂಗೇರಿ ಮಾರ್ಗವಾಗಿ ಎಂಟು ಬಸ್‌ಗಳು ಸಂಚಾರ ಪ್ರಾರಂಭಿಸಿವೆ. ಆದಾಯದಲ್ಲಿ ಯಾವುದೇ ಸಮಸ್ಯೆ ಇಲ್ಲ, ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.ಹನುಮಂತರಾಜು, ನಿರ್ವಾಹಕ, ಮಾಗಡಿ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.