ಕುದೂರು(ಮಾಗಡಿ): ಗ್ರಾಮದ ಗೋಂದಾವಳಿ ಬ್ರಹ್ಮ ಚೈತನ್ಯ ಸದ್ಗುರು ಮಹಾರಾಜರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬ್ರಹ್ಮ ಚೈತನ್ಯ ರಾಮಮದಿರ ಟ್ರಸ್ಟ್ ಇವರ ವತಿಯಿಂದ ಗುರುವಾರ ರಾಮಮದಿರ ದೇವಾಲಯದಲ್ಲಿ ಧಾರ್ಮಿಕ ಪೂಜಾದಿಗಳನ್ನು ನಡೆಸಲಾಯಿತು.
ರಾಮದೇವರಿಗೆ ಕಾಕಾಡಾರತಿ , ಬ್ರಹ್ಮ ಚೈತನ್ಯ ಮಹಾರಾಜರ ಪಾದುಕೆಗಳಿಗೆ ಏಕವಾರ ರುದ್ರಾಭಿಷೇಕ , ಗುರುಮಹಾರಾಜರಿಗೆ ತೊಟ್ಟಿಲು ಸೇವೆ . 12 ರಿಂದ ಅಷ್ಟಾವಧಾನ ಸೇವೆ , ಮಂತ್ರ ಪುಷ್ಪ ,ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು ಟ್ರಸ್ಟಿನ ಪದಾಧಿಕಾರಿಗಳು ಮತ್ತು ಭಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.