ಚನ್ನಪಟ್ಟಣ: ಪ್ರಪಂಚಕ್ಕೆ ಶಾಂತಿ ಹಾಗೂ ಅಹಿಂಸೆ ತತ್ವವನ್ನು ಬೋಧಿಸಿದ ಗೌತಮ ಬುದ್ಧ ಅವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ನರಸಿಂಹಮೂರ್ತಿ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಸೋಮವಾರ ನಡೆದ ಗೌತಮ ಬುದ್ಧ ಜಯಂತಿಯಲ್ಲಿ ಬುದ್ಧರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಚಕ್ರವರ್ತಿಯಾಗಿದ್ದುಕೊಂಡು ಸಮಾಜದಲ್ಲಿದ್ದ ಕೆಲವು ನೋವುಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಚಕ್ರವರ್ತಿ ಜೀವನವನ್ನು ತೊರೆದು ಸನ್ಯಾಸದ ದಾರಿಯನ್ನು ಕಂಡುಕೊಂಡುವರು ಗೌತಮ ಬುದ್ಧ. ಸಮಾಜಕ್ಕೆ ಶಾಂತಿ, ಅಹಿಂಸೆ, ಸಹಬಾಳ್ವೆಯನ್ನು ಬೋಧನೆ ಮಾಡಿದವರು. ಎಲ್ಲ ಜೀವಿಗಳಲ್ಲಿಯೂ ಕರುಣೆ, ದಯೆ ಇರಬೇಕು ಎಂಬುದನ್ನು ಸಾರಿ ತೋರಿಸಿದವರು. ಅಂತಹ ಮಹಾನ್ ವ್ಯಕ್ತಿಯ ಜಯಂತಿಯನ್ನು ಬುದ್ಧ ಪೌರ್ಣಮಿಯಾಗಿ ಆಚರಿಸಲಾಗುತ್ತಿದೆ ಎಂದರು.
ನಗರಸಭೆ ಪೌರಾಯುಕ್ತ ಮಹೇಂದ್ರ, ಗ್ರೇಡ್ 2 ತಹಶೀಲ್ದಾರ್ ಲಕ್ಷ್ಮಿದೇವಮ್ಮ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೆ.ಪಿ. ರಾಜು, ಉಪ ತಹಶೀಲ್ದಾರ್ ಹರೀಶ್, ಕಂದಾಯ ಇಲಾಖೆಯ ಗಿರೀಶ್, ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ ನಾಗೇಶ್, ಮುಖಂಡರಾದ ಸಿದ್ದರಾಮಯ್ಯ, ಅಕ್ಕೂರು ಶೇಖರ್, ಮತ್ತೀಕೆರೆ ಹನುಮಂತಯ್ಯ, ವೆಂಕಟೇಶ್, ಅಪ್ಪಗೆರೆ ಶ್ರೀನಿವಾಸ್, ಬಿವಿಎಸ್ ಕುಮಾರ್, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.