ADVERTISEMENT

ಕೊರೊನಾ ಸೋಂಕು ಹೆಚ್ಚಳ: ಕಾಳಘಟ್ಟಮ್ಮ, ಕರಡಿಗುಚ್ಚಮ್ಮ ಜಾತ್ರೆ ರದ್ದು

ತಹಶೀಲ್ದಾರ್‌ ಆದೇಶ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 4:30 IST
Last Updated 23 ಏಪ್ರಿಲ್ 2021, 4:30 IST
ಮಾಗಡಿ ಬೈಚಾಪುರದ ಕಾಳಘಟ್ಟಮ್ಮದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಮಾಗಡಿ ಬೈಚಾಪುರದ ಕಾಳಘಟ್ಟಮ್ಮದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.   

ಮಾಗಡಿ: ತಾಲ್ಲೂಕಿನ ಬೈಚಾಪುರದ ಕಾಳಘಟ್ಟಮ್ಮದೇವಿ ಜಾತ್ರೆಯನ್ನು ರದ್ದುಪಡಿಸಲಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಸೋಂಕು ಪೀಡಿತರ ಸಂಖ್ಯೆ ದಿನೇ ದಿನೇ ಅಧಿಕವಾಗುತ್ತಿರುವುದರಿಂದ ಎಲ್ಲಾ ಜಾತ್ರೆಗಳನ್ನು ರದ್ದುಪಡಿಸಲಾಗಿದೆ. ಗುರುವಾರ ಕಾಳಘಟ್ಟಮ್ಮದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು.

ಕರಡಿಗುಚ್ಚಮ್ಮ ಜಾತ್ರೆ ರದ್ದು: ತಾಲ್ಲೂಕಿನ ರಸ್ತೆಪಾಳ್ಯದ ಕರಡಿಗುಚ್ಚಮ್ಮ ದೇವಿ ಅಗ್ನಿಕುಂಡ ಮತ್ತು ಕುರ್ಜು ಉತ್ಸವವನ್ನು ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ ಎಂದು ತಹಶೀಲ್ದಾರ್‌ ಬಿ.ಜಿ. ಶ್ರೀನಿವಾಸ ಪ್ರಸಾದ್‌ ತಿಳಿಸಿದ್ದಾರೆ.

ADVERTISEMENT

ಜಾತ್ರೆ ರದ್ದಾಗಿರುವ ಹಿನ್ನೆಲೆಯಲ್ಲಿ ಅರಿಸಿನ ಕುಂಟೆ, ಮಲ್ಲಿಗುಂಟೆ, ಮಾದಿಗೊಂಡನಹಳ್ಳಿ, ರಸ್ತೆಪಾಳ್ಯ, ನಾರಸಂದ್ರ ಮರೂರು, ಮಣ್ಣೀಗನಹಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಕುರ್ಜುಗಳಿಗೆ ಮನೆಗಳಲ್ಲಿಯೇ ಪೂಜೆ ಸಲ್ಲಿಸಲಾಗುತ್ತಿದೆ ಎಂದು ನಿವೃತ್ತ ಶಿಕ್ಷಕ ಗಂಗಹನುಮಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.